×
Ad

ಮಣಿರತ್ನಂ ಚಿತ್ರಕ್ಕೆ ಅದಿತಿ ನಾಯಕಿ

Update: 2016-11-20 19:16 IST

ನಾಯಗನ್, ರೋಜಾ ಹಾಗೂ ಬಾಂಬೆನಂತಹ ಅದ್ಭುತ ಚಿತ್ರಗಳನ್ನು ನೀಡಿರುವ ನಿರ್ದೇಶಕ ಮಣಿರತ್ನಂ ಇದೀಗ ತಮಿಳು ಚಿತ್ರವೊಂದರ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ‘ಕಾಟ್ರು ವಿಳೆಯಾಡಿ’ ಎಂದು ಹೆಸರಿಡಲಾಗಿದೆ.

ಚಿತ್ರದ ಬಹುತೇಕ ಭಾಗ ಕಾಶ್ಮೀರ ಹಾಗೂ ಊಟಿಯಲ್ಲಿ ಚಿತ್ರೀಕರಣಗೊಳ್ಳಲಿದ್ದು, ಖ್ಯಾತ ಛಾಯಾಗ್ರಹಕ ರವಿವರ್ಮಾ ಕ್ಯಾಮರಾಹಿಡಿದಿದ್ದಾರೆ. ಮಣಿರತ್ನಂರ ಈ ಚಿತ್ರಕ್ಕೆ ಎಂದಿನಂತೆ ಎ.ಆರ್.ರಹ್ಮಾನ್ ಸಂಗೀತ ನಿರ್ದೇಶನ ನೀಡಿದ್ದಾರೆ. ಬಾಲಿವುಡ್‌ನ ಉದಯೋನ್ಮುಖ ನಟಿ, ರೂಪದರ್ಶಿ ಅದಿತಿರಾವ್ ಹೈದರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಭಿನ್ನವಾದ ಪ್ರೇಮಕಥಾನಕವನ್ನು ಹೊಂದಿರುವ ಚಿತ್ರದಲ್ಲಿ ನಾಯಕ ಕಾರ್ತಿ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಅದಿತಿಗೆ ಡಾಕ್ಟರ್ ಪಾತ್ರವಂತೆ. ಇದರ ಜೊತೆ ತಮಿಳಿನಲ್ಲಿ ಹಾಸ್ಯ ಪಾತ್ರಗಳಿಂದ ಜನಪ್ರಿಯರಾಗಿರುವ ಬಾಲಾಜಿ ಕೂಡಾ ಅಭಿನಯಿಸುತ್ತಿದ್ದಾರೆ.

ಕಳೆದ ವರ್ಷ ತೆರೆಕಂಡ ಮಣಿರತ್ನಂ ನಿರ್ದೇಶನದ ಓ.ಕೆ. ಕಣ್ಮಣಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಕಾಟ್ರು ವೆಳೆಯಾಡಲ್ ಮತ್ತೆ ಮಣಿರತ್ನಂರನ್ನು ಗೆಲುವಿನ ದಡಕ್ಕೆ ಸೇರಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News