×
Ad

2.0 ಫಸ್ಟ್ ಲುಕ್ : ಭಾರತದ ಅತ್ಯಂತ ದುಬಾರಿ ಚಿತ್ರದಲ್ಲಿ ಯಾರಿದ್ದಾರೆ? ಏನೇನಿದೆ?

Update: 2016-11-21 13:36 IST

ಬಹುನಿರೀಕ್ಷಿತ 2.0 ಫಸ್ಟ್ ಲುಕ್ ಬಹಿರಂಗವಾಗಿದೆ. ಈ ಮೊದಲ ನೋಟವೇ ರಜನೀಕಾಂತ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ. ಶಂಕರ್ ನಿರ್ದೇಶನದ ಈ ಚಿತ್ರ ಎಂಥಿರಾನ್ (ರೋಬೋಟ್) ಚಿತ್ರವನ್ನು ಹೋಲುವಂಥದ್ದು. ಜತೆಗೆ ತಮಿಳು ಚಿತ್ರರಂಗಕ್ಕೆ ಅಕ್ಷಯ್ ಕುಮಾರ್ ಅವರನ್ನು ಪರಿಚಯಿಸುವಂಥ ಅಪೂರ್ವ ಚಿತ್ರ. 350 ಕೋಟಿ ರೂಪಾಯಿ ವೆಚ್ಚದ ಅದ್ದೂರಿ ಚಿತ್ರ ಥ್ರಿಲ್ಲರ್ ಚಿತ್ರವಾಗಿದ್ದು, ಅತ್ಯುನ್ನತ ತಂತ್ರಜ್ಞಾನ, ವಿಎಫ್‌ಎಕ್ಸ್ ಮತ್ತು ಆಕ್ಷನ್ ಒಳಗೊಂಡಿದೆ.
ಚಿತ್ರದ ಸುಧೀರ್ಘ ಟ್ಯಾಗ್‌ಲೈನ್ "ವರ್ಲ್ಡ್ ಈಸ್ ನಾಟ್ ಓನ್ಲಿ ಫಾರ್ ಹ್ಯೂಮನ್" ಎಂದು ಹೇಳುತ್ತದೆ. ಜತೆಗೆ ಅಕ್ಷಯ್ ಕುಮಾರ್ ಅವರ ಲುಕ್ ಕೂಡಾ ವಿಭಿನ್ನವಾಗಿದ್ದು, ಚಿತ್ರಕ್ಕೆ ಅನ್ಯಲೋಕದವರೇ? ಇದಕ್ಕೆ ಈ ಥ್ರಿಲ್ಲರ್ ಉತ್ತರಿಸಬೇಕು. ಚಿತ್ರದ ಟೀಸರ್ ಸಂಪೂರ್ಣವಾಗಿ 3ಡಿ ಲಕ್ಷಣಗಳನ್ನು ಒಳಗೊಂಡಿದ್ದು, ಚಿಟ್ಟಿ ಹಾಗೂ ಅವರ ಆಕ್ಷನ್‌ಗಳು ಚಿತ್ರದ ಪ್ರಮುಖ ಆಕರ್ಷಣೆ.
ಈ ಚಿತ್ರದ ಬಿಡುಗಡೆ ಸಮಾರಂಭವೇ ಆರು ಕೋಟಿ ವೆಚ್ಚದ ಅದ್ದೂರಿ ಕಾರ್ಯಕ್ರಮ. ಕರಣ್ ಜೋಹರ್ ನಿರೂಪಣೆ. ಎಸ್‌ಆರ್‌ಕೆ, ಕಮಲ್‌ಹಾಸನ್ ಹಾಗೂ ಹಲವು ಮಂದಿ ಎ ಲಿಸ್ಟ್ ಕಲಾವಿದರನ್ನು ಈ ಅದ್ದೂರಿ ಚಿತ್ರದ ಬಿಡುಗಡೆಗೆ ಆಹ್ವಾನಿಸಲಾಗುತ್ತಿದೆ. ಚಿತ್ರದ ಟ್ರೇಲರ್ ಇದನ್ನು ಸಮರ್ಥಿಸುತ್ತದೆ.
ಚಿತ್ರದ ಮೊದಲ ಪೋಸ್ಟರ್‌ಗೆ ರಜನೀಕಾಂತ್ ನವೆಂಬರ್ 7ರಂದು ಚಾಲನೆ ನೀಡಿದ್ದರು. ಎಮಿ ಜಾಕ್ಸನ್, ಸುಧಾಂಶು ಪಾಂಡೆ ಹಾಗೂ ಅದಿಲ್ ಹುಸೇನ್ ಚಿತ್ರದಲ್ಲಿದ್ದಾರೆ. ಆಸ್ಕರ್ ವಿಜೇತ ಸಂಗೀತ ಸಂಯೋಜಕ ಎ.ಆರ್.ರಹಮಾನ್ ರ ಸಂಗೀತವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News