ಎಂಎಚ್370 ವಿಮಾನದ ಅವಶೇಷ ಪತ್ತೆಹಚ್ಚಲು ಆಫ್ರಿಕ ಪ್ರವಾಸ : ಸಂತ್ರಸ್ತರ ಕುಟುಂಬಿಕರ ಸಂಘಟನೆ

Update: 2016-11-21 16:10 GMT

ಕೌಲಾಲಂಪುರ, ನ. 21: ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನಕ್ಕೆ ಏನಾಗಿದೆ ಎಂಬ ಕುರಿತ ಸುಳಿವುಗಳನ್ನು ಪಡೆಯಲು ತಾವು ಮಡಗಾಸ್ಕರ್‌ಗೆ ಅವಶೇಷ ಪತ್ತೆ ಪ್ರವಾಸ ಕೈಗೊಳ್ಳುವುದಾಗಿ ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಕರು ಸೋಮವಾರ ಹೇಳಿದ್ದಾರೆ.

ಆರು ಅವಶೇಷಗಳು ನಾಪತ್ತೆಯಾದ ವಿಮಾನದಿಂದ ಬಂದವುಗಳು ಎಂಬುದನ್ನು ತನಿಖಾಧಿಕಾರಿಗಳು ಬಹುತೇಕ ಖಚಿತಪಡಿಸಿದ್ದಾರೆ.

2014 ಮಾರ್ಚ್ 8ರಂದು ರಾತ್ರಿ 239 ಮಂದಿಯನ್ನು ಹೊತ್ತು ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರುತ್ತಿದ್ದ ಎಂಎಚ್370 ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು.

ಈವರೆಗೆ ಪತ್ತೆಯಾದ ಎಲ್ಲ ಅವಶೇಷಗಳು ಆಫ್ರಿಕದ ಪೂರ್ವ ಕರಾವಳಿಯಲ್ಲಿ ಕಾಣಿಸಿಕೊಂಡಿವೆ ಎಂದು ಸಂತ್ರಸ್ತ ಕುಟುಂಬಗಳ ಸಂಘಟನೆ ‘ವಾಯ್ಸಿ 370’ ಹೇಳಿದೆ.

‘‘ಈ ಅತ್ಯಂತ ಮಹತ್ವದ ಪತ್ತೆಗಳ ಹೊರತಾಗಿಯೂ, ಯಾವುದೇ ಜವಾಬ್ದಾರಿಯುತ ಸಂಸ್ಥೆಯು ವ್ಯವಸ್ಥಿತ, ಸಂಘಟಿತ ಶೋಧ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ, ಉತ್ತರಗಳನ್ನು ಕಂಡುಹಿಡಿಯುವ ಹಾಗೂ ಘಟನೆಗೆ ತಾರ್ಕಿಕ ಅಂತ್ಯವೊಂದನ್ನು ನೀಡುವ ಜವಾಬ್ದಾರಿಯನ್ನು ನಾವೇ ಹೊತ್ತುಕೊಳ್ಳಬೇಕಾಗಿದೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News