×
Ad

ಕೆನಡ: ವಿದೇಶಗಳ ನಾಗರಿಕರಿಗೂ ಮತ ಹಾಕಲು ಅವಕಾಶ

Update: 2016-11-25 21:26 IST

ಒಟ್ಟಾವ, ನ. 25: ಐದು ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ದೇಶದಿಂದ ಹೊರಗೆ ವಾಸಿಸುತ್ತಿರುವ ನಾಗರಿಕರಿಗೂ ತಮ್ಮ ಮತದಾನದ ಹಕ್ಕು ಚಲಾಯಿಸಲು ಸಾಧ್ಯವಾಗುವ ಮಸೂದೆಯೊಂದನ್ನು ಕೆನಡ ಗುರುವಾರ ಅನುಮೋದಿಸಿದೆ.ಚುನಾವಣಾ ಕಾನೂನುಗಳಿಗೆ ಸುಧಾರಣೆ ತರುವ ತನ್ನ ಚುನಾವಣಾ ಭರವಸೆಯನ್ನು ಲಿಬರಲ್ ಸರಕಾರ ಈಡೇರಿಸಿದಂತಾಗಿದೆ.

10 ಲಕ್ಷಕ್ಕೂ ಅಧಿಕ ಕೆನಡ ಪ್ರಜೆಗಳು ವಿದೇಶಗಳಲ್ಲಿ ವಾಸಿಸುತ್ತಿದ್ದು, ಈ ಮಸೂದೆಯು ಅವರಿಗೆ ಅನ್ವಯಿಸುತ್ತದೆ ಹಾಗೂ ಕೆನಡದ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ ಎಂದು ಮಸೂದೆಯನ್ನು ಮಂಡಿಸಿದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸಚಿವೆ ಮರ್ಯಮ್ ಮೊನ್ಸೆಫ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News