ಆಲಿಯಾ ಈ ಚಿತ್ರದ ಜೀವಾಳ : ಆಕೆಯೇ ಹೀರೋ, ಹೀರೋಯಿನ್

Update: 2016-11-26 09:30 GMT

ಲೇಖಕಿ- ನಿರ್ದೇಶಕಿ ಗೌರಿ ಶಿಂಧೆಯ 'ಡಿಯರ್ ಝಿಂದಗಿ' ಸಿನೆಮಾದ ನಾಯಕಿ 20 ವರ್ಷದ ಕೈರಾ (ಆಲಿಯಾ ಭಟ್) ತಾನು 10ನೇ ತರಗತಿಯಿಂದ ಧರಿಸುತ್ತಾ ಬಂದಿರುವ ಜಾಕೆಟ್ ತೋರಿಸುತ್ತಾ ತನ್ನ ಸ್ನೇಹಿತರ ಜೊತೆಗೆ ಧೀರ್ಘ ಕಾಲೀನ ಸಂಬಂಧಗಳನ್ನು ತಾನು ಉಳಿಸಿಕೊಳ್ಳಬಲ್ಲೆ ಎಂದು ಚರ್ಚಿಸುತ್ತಾಳೆ. ಭಾವನಾತ್ಮಕವಾಗಿ ಗೊಂದಲದಲ್ಲಿರುವ ಯುವತಿ ಕೈರಾ. ಆಕೆಗೆ ಬದ್ಧತೆಯಿಲ್ಲ. ತನ್ನ ಹೃದಯ ಏನು ಬಯಸುತ್ತದೆ ಎನ್ನುವುದು ಆಕೆಗೇ ಗೊತ್ತಿಲ್ಲ. ಯುವಕರು ತನ್ನ ಜೀವನ ಪ್ರವೇಶಿಸಲು ಪ್ರಯತ್ನಿಸಿದರೆ ದೊಡ್ಡ ಅಡ್ಡಗೋಡೆ ಇಡುತ್ತಾಳೆ. ಹಾಗೆಯೇ ತನ್ನ ಹೆತ್ತವರ ಜೊತೆಗೆ ಕೆಲವು ಅಸಮಧಾನಗಳೂ ಆಕೆಯನ್ನು ಕಾಡುತ್ತವೆ.

ಈ ನಟನೆಯನ್ನು ತೋರಿಸುವುದು ಯಾವುದೇ ನಟರಿಗೂ ಕಷ್ಟ. ಆಲಿಯಾರಂತಹ ಚಿಕ್ಕವಯಸ್ಸಿನ ಯುವತಿಗೆ ಮಾತ್ರವಲ್ಲ. ಏಕೆಂದರೆ ಜನರು ಸುಲಭವಾಗಿ ಈ ಪಾತ್ರವನ್ನು ಇಷ್ಟಪಡಲಾರರು. ಆಕೆ ಮೂಡಿ, ಕೆಟ್ಟ ನಿರ್ಧಾರ ಕೈಗೊಳ್ಳುತ್ತಾಳೆ, ಬಹಳ ಸ್ವಾರ್ಥಿ. ಆದರೆ ಆಲಿಯಾ ಮಾತ್ರ ಈ ಪಾತ್ರವನ್ನು ಸಹಜವಾಗಿ ನಟಿಸಿದ್ದಾರೆ. ಇದೇ ಕಾರಣದಿಂದ ಸಿನಿಮಾದಲ್ಲಿ ಆಸಕ್ತಿ ಉಳಿಯುತ್ತದೆ. ಅತಿಯಾದ ಮಾತುಕತೆ ಮತ್ತು ಎತ್ತಲೋ ಸಾಗುವ ಚಿತ್ರಕತೆ ನಡುವೆ ಆಲಿಯಾರ ಪ್ರದರ್ಶನ ಒ್ಟಾರೆ ಸಿನಿಮಾದ ಅತ್ಯುತ್ತಮ ಅಂಶ.

ಶಾರುಕ್ ಖಾನ್ ಚಾರ್ಮಿಂಗ್ ವ್ಯಕ್ತಿತ್ವ ಹೊಂದಿದವರಂತೆ ಕಂಡರೂ ಜೆಹಾಂಗೀರ್ ಖಾನ್ ಪಾತ್ರದಂತಹ ಪರಂಪರೆಗೆ ವಿರುದ್ಧವಾದ ಪಾತ್ರಕ್ಕೆ ಜೀವ ತುಂಬಿಲ್ಲ. ಗೋವಾದಲ್ಲಿ ಕೈರಾ ಸಲಹೆ ಕೇಳಲು ಹೋಗುವ ಥೆರಪಿಸ್ಟ್ ಪಾತ್ರವನ್ನು ಶಾರುಕ್ ನಟಿಸಿದ್ದಾರೆ. ನಡಿಗೆ, ಕಡಲತೀರ ಮತ್ತು ಸೈಕ್ಲಿಂಗ್ ಸೆಷನ್ ಗಳಲ್ಲಿ ಜೆಹಾಂಗೀರ್ ನೀಡುವ ಸಲಹೆಗಳು ಬಂಪರ್ ಸ್ಟಿಕರ್‌ಗಳಲ್ಲಿ ಉಚಿತವಾಗಿ ಸಿಗುತ್ತವೆ. ಒಂದು ಹಂತದಲ್ಲಿ ಕೈರಾಗೆ ಅವರು ಹೇಳುವ ಮಾತು, ನಿನ್ನ ಇತಿಹಾಸವು ನಿನ್ನ ಪ್ರಸ್ತುತವನ್ನು ಬ್ಲಾಕ್‌ಮೈಲ್ ಮಾಡಿ ಸುಂದರ ಭವಿಷ್ಯವನ್ನು ಹಾಳುಗೆಡವುವಂತೆ ಮಾಡಬೇಡ. ಮತ್ತೊಂದು ಬಾರಿ ಸರಳವಾಗಿ ಏನೋ ಒಂದು ಶಬ್ದ ಆಡುತ್ತಾನೆ.

ಗೌರಿ ಶಿಂಧೆಯ ಹಿಂದಿನ ಸಿನಿಮಾ 'ಇಂಗ್ಲಿಷ್ ವಿಂಗ್ಲಿಷ್' ನಲ್ಲಿ ಭಾವನೆಗಳು ನಿಜವಾಗಿದ್ದವು ಮತ್ತು ಅದರ ಜೊತೆಗೆ ಗುರುತಿಸಿಕೊಳ್ಳಬಹುದಾಗಿತ್ತು. ಆದರೆ ಡಿಯರ್ ಜಿಂದಗಿ ಸಿನಿಮಾದಲ್ಲಿ ಮುಖ್ಯವಾಗಿ ಮೊದಲ ಭಾಗ ಅತೀ ಮೌಢ್ಯ ಮತ್ತು ಕಾಲ್ಪನಿಕವಾಗಿ ಕಾಣಿಸುತ್ತದೆ. ಕೈರಾ ಮತ್ತು ಆಕೆಯ ಸ್ನೇಹಿತರ ನಡುವಿನ ಜಗಳ ಒತ್ತಡದ ಮಾತುಕತೆಗಳಾಗಿ ಕಾಣಿಸುತ್ತದೆ. ಆಕೆಯ ಹೆತ್ತವರು ಮತ್ತು ಸಂಬಂಧಿಕರು ಮದುವೆ ಮತ್ತು ನಿಜವಾದ ಉದ್ಯೋಗ ಪಡೆಯುವ ಬಗ್ಗೆ ಮಾತನಾಡುವ ಸಿದ್ಧಪಾತ್ರಗಳಾಗಿ ಕಾಣುತ್ತಾರೆ. ಕೈರಾ ಸಿನೆಮಟೋಗ್ರಾಫರ್ ಆಗುವ ಮಹಾತ್ವಾಕಾಂಕ್ಷೆ ಹೊಂದಿರುತ್ತಾರೆ. ಆಕೆಯ ವೃತ್ತಿ, ಪ್ರತಿಭೆ ಮತ್ತು ಅದರ ಅಡೆತಡೆಗಳನ್ನು ಆಕೆ ಎದುರಿಸುವುದನ್ನು ಸರಿಯಾಗಿ ನಿರೂಪಣೆ ಮಾಡಿಲ್ಲ.

ಹಾಗಿದ್ದರೂ ಆಲಿಯಾ ಇಷ್ಟವಾಗುತ್ತಾರೆ. ಆಕೆಯ ನಟನೆಯೇ ಸಿನಿಮಾದ ನಿಜವಾದ ಆಸ್ತಿ. ಥೆರಪಿ ಶೆಷನ್ ನಲ್ಲಿ ಆಕೆಯ ಭಾವನೆಗಳನ್ನು ಕರಾರುವಕ್ಕಾಗಿ ಹರಿಬಿಡುವ ರೀತಿಯಿಂದ ಪ್ರೇಕ್ಷಕರು ಕರಗಿ ಹೋಗುತ್ತಾರೆ. ಆದರೆ ಮಾನಸಿಕ ಆರೋಗ್ಯದ ಕುರಿತಂತೆ ಇರುವ ಮತ್ತು ಮಾನಸಿಕ ಥೆರಪಿ ಕುರಿತಂತೆ ಇರುವ ನಾಚಿಕೆಯನ್ನು ಈ ಸಿನಿಮಾ ನಿವಾರಿಸುವ ಪ್ರಯತ್ನ ಮಾಡಿರುವುದು ಉತ್ತಮ ಉದ್ದೇಶ. ಆದರೆ ಒಟ್ಟಾರೆ ಹತಾಶ ಕತೆಯಲ್ಲಿ ಇವು ಕೆಲವು ಸಣ್ಣ ಕೊಡುಗೆಗಳಷ್ಟೇ. ನಾನು ಡಿಯರ್ ಜಿಂದಗಿ ಸಿನಿಮಾಗೆ ಐದರಲ್ಲಿ ಎರಡು ಸ್ಟಾರ್ ಕೊಡುತ್ತೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ ಬೋರಿಂಗ್ ಸಿನಿಮಾ.

ಕೃಪೆ: www.news18.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News