×
Ad

ಪಟ್ಟಣಂತಿಟ್ಟದಲ್ಲಿ ರಸ್ತೆ ಅಪಘಾತ ; ಇಬ್ಬರು ಶಬರಿಮಲೆ ಮಹಿಳಾ ಯಾತ್ರಿಕರ ಸಾವು

Update: 2016-11-27 09:34 IST

ಪಟ್ಟಣಂತಿಟ್ಟ, ನ.27: ಜೀಪು ಹಾಗೂ ಕೆಎಸ್‌ಆರ್‌ಟಿಸಿ ಬಸ್ಸು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಶಬರಿಮಲೆ ಮಹಿಳಾ ಯಾತ್ರಿಕರು ಮೃತಪಟ್ಟು , ನಾಲ್ವರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಪಟ್ಟಣಂತಿಟ್ಟದಲ್ಲಿ ಸಂಭವಿಸಿದೆ.
ಬಸ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಜೀಪ್‌ನಲ್ಲಿದ್ದ ತಿರುವನಂತಪುರ ನಿವಾಸಿಗಳಾದ ಸರಸ್ವತಿಯಮ್ಮ(55) ಮತ್ತು ಸರೋಜಿನಿಯಮ್ಮ(51) ಎಂಬವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ಇವರು ಶಬರಿಮಲೆ ಯಾತ್ರೆ ಮುಗಿಸಿ ಜೀಪಿನಲ್ಲಿ ವಾಪಸಾಗುತ್ತಿದ್ದಾಗ ಇವರ ಜೀಪ್‌ಗೆ ಬಸ್‌ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು ಎಂದು ವರದಿ ತಿಳಿಸಿದೆ. ಗಾಯಗೊಂಡವರನ್ನು ಕೊಟ್ಟಾಯಂ ಮೆಡಿಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News