×
Ad

ಪಂಜಾಬ್ ನಾಭಾ ಜೈಲಿನಿಂದ ನಿಷೇಧಿತ ಉಗ್ರ ಸಂಘಟನೆ ಕೆಎಲ್‌ಎಫ್ ಮುಖ್ಯಸ್ಥ ಮಿಂಟೊ ಸೇರಿದಂತೆ 6 ಮಂದಿ ಕೈದಿಗಳು ಪರಾರಿ

Update: 2016-11-27 11:23 IST

ಹೊಸದಿಲ್ಲಿ, ನ.27: ಪಂಜಾಬ್ ಪಟಿಯಾಲ ಸಮೀಪದ ನಾಭಾ ಜೈಲಿಗೆ ಹತ್ತು ಮಂದಿ ಶಸ್ತ್ರಾಸ್ತ್ರಧಾರಿ ದುಷ್ಕಮಿಗಳು ದಾಳಿ ನಡೆಸಿ, ನಿಷೇಧಿತ ಉಗ್ರ ಸಂಘಟನೆ ಖಲಿಸ್ತಾನ್ ಲಿಬರೇಷನ್ ಫೋರ್ಸ್ (ಕೆಎಲ್‌ಎಫ್) ಮುಖ್ಯಸ್ಥ ಹರ್ಮಿಂದರ‍್ ಸಿಂಗ್‌ ಮಿಂಟೊ ಸೇರಿದಂತೆ  6 ಕೈದಿಗಳೊಂದಿಗೆ ಪರಾರಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪೊಲೀಸ್ ಸಮವಸ್ತ್ರ ಧರಿಸಿ ಜೈಲಿಗೆ ನುಗ್ಗಿದ  ದುಷ್ಕರ್ಮಿಗಳು ಜೈಲಿನ ಆವರಣದಲ್ಲಿ  ನೂರು ಸುತ್ತು ಗುಂಡು ಹಾರಿಸಿ ಜೈಲು  ಸಿಬಂದಿಗಳನ್ನು ಬೆದರಿಸಿದರು.
 ಕೆಎಲ್‌ಎಫ್ ಮುಖ್ಯಸ್ಥ ಮಿಂಟೊನನ್ನು ಜೈಲಿನಿಂದ ರಕ್ಷಿಸಲು  ದುಷ್ಕರ್ಮಿಗಳು ನುಗ್ಗಿದ್ದಾರೆಂದು  ಹೇಳಲಾಗಿದ್ದು, ಇವರೊಂದಿಗೆ ಜೈಲಿನಲ್ಲಿದ್ದ ಗ್ಯಾಂಗ್ ಸ್ಟರ್‌ಗಳಾದ ಗುರುಪ್ರೀತ್‌ ಸಿಂಗ್‌, ವಿಕ್ಕಿ ಗೊಂಡ್ರಾ, ನಿತಿನ್‌ ಡೋಲ್‌ ಮತ್ತು ವಿಕ್ರಮಜೀತ್‌ ಸಿಂಗ್‌ ವಿಕ್ಕಿ ,ಶಂಕಿತ ಉಗ್ರ ಕಾಶ್ಮೀರ್ ಗಾಲ್ವಾಡಿ ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಜೊತೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ದುಷ್ಕರ್ಮಿಗಳು ಕೈದಿಗಳಿಗೆ ಪರಾರಿಯಾಗಲು ಅನುಕೂಲವಾಗುವಂತೆ ಮೂರು ವಾಹನಗಳೊಂದಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News