×
Ad

2000ರೂ.ನೋಟಿನ ಕಲರ್ ಪ್ರಿಂಟ್ ಬಳಸಿ ಸಾಲ ಚುಕ್ತಕ್ಕೆ ಯತ್ನ !

Update: 2016-11-27 12:14 IST

ಕೊಯಮತ್ತೂರ್, ನ. 27: ತಮಿಳುನಾಡಿನ ತಿರಿಪ್ಪೂರ್‌ನಲ್ಲಿ 2000ರೂಪಾಯಿಯ ಕಲರ್ ಪ್ರಿಂಟ್ ತೆಗೆದು ಖಾಸಗಿ ಫೈನಾನ್ಸ್‌ಗೆ ದ್ವಿಚಕ್ರ ವಾಹನ ಸಾಲದ ಕಂತು ಪಾವತಿಸಲು ಶ್ರಮಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

 ತಿರಿಪ್ಪೂರ್ ಕಣಕಂಪಾಳಯಂ ಚಂದ್ರನ್(41) ಎಂಬವರು ತಿರಿಪ್ಪೂರ್-ಅವಿನಾಶಿ ರಸ್ತೆಯ ಖಾಸಗಿ ಹಣಕಾಸು ವ್ಯವಹಾರ ಸಂಸ್ಥೆಯಿಂದ ಮಗನಿಗೆ ಬೈಕ್ ಖರೀದಿಸಲು ಮೂವತ್ತು ಸಾವಿರ ರೂಪಾಯಿ ಸಾಲ ತೆಗೆದಿದ್ದರು. ಕಲರ್ ಪ್ರಿಂಟ್ ನೋಟುಗಳಿಂದ ಸಾಲದ ತಿಂಗಳ ಕಂತು ಪಾವತಿಸಲು ಶ್ರಮಿಸುತ್ತಿದ್ದಾಗ ಪೊಲೀಸರು ಚಂದ್ರನ್‌ರನ್ನು ಕಸ್ಟಡಿಗೆ ಪಡೆದಿದ್ದಾರೆ. 2000ರೂಪಾಯಿ ನೋಟಿನ ಕುರಿತು ಜನರಿಗೆ ಹೆಚ್ಚೇನು ಗೊತ್ತಿರಲಾರದೆಂದು ಭಾವಿಸಿ ಫೋಟೊಸ್ಟಾಟ್ ಪ್ರತಿ ತೆಗೆದು ಚಲಾಯಿಸಲು ಯತ್ನಿಸಿದ್ದೇನೆಂದುಪೊಲೀಸ್ ವಿಚಾರಣೆಯ ವೇಳೆ ಚಂದ್ರನ್ ತಪ್ಪೊಪ್ಪಿಕೊಂಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News