×
Ad

ಬಡವರನ್ನು ಬಳಸಿಕೊಂಡ್ರೆ ಸುಮ್ಮನಿರಲ್ಲ: ಪ್ರಧಾನಿ ಮೋದಿ ಕಾಳ ಧನಿಕರಿಗೆ ಎಚ್ಚರಿಕೆ

Update: 2016-11-27 13:45 IST

 ಹೊಸದಿಲ್ಲಿ, ನ.27: ಕಾಳ ಧನಿಕರು ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿ ಮಾಡಲು ಬಡವರನ್ನು ಬಳಸಿಕೊಂಡರೆ ಸುಮ್ಮನಿರುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡವರ ಖಾತೆಗಳಿಗೆ ತಮ್ಮಲ್ಲಿರುವ ಕಪ್ಪು ಹಣವನ್ನು ತುಂಬಿಸಿ, ಬಡವರನ್ನು ಸಂಕಷ್ಟಕ್ಕೆ ಸಿಲುಕಿಸುವ ಶ್ರೀಮಂತರ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ  ಹೇಳಿದ್ದಾರೆ.
ಯುವಕರು ತಮ್ಮ ಮನೆ ಮಂದಿಯ ಬ್ಯಾಂಕ್ ಖಾತೆಗಳ ಬಗ್ಗೆ ನಿಗಾ ಇಡುವಂತೆ ಮನವಿ ಮಾಡಿರುವ ಪ್ರಧಾನಿ ಮೋದಿ ‘‘ ಕೆಲವರು ಇನ್ನೂ ಕೂಡಾ ಭ್ರಷ್ಟಾಚಾರ ಅಥವಾ ಅಕ್ರಮವಾಗಿ ಸಂಪಾದಿಸಿರುವ ಹಣವನ್ನು ಕಾನೂನು ಬಾಹಿರ ವ್ಯವಹಾರಗಳ ಮೂಲಕ ಮರಳಿ ಪಡೆಯುವ ಕನಸು ಕಾಣುತ್ತಿದ್ದಾರೆ ’’ ಎಂದು ಎಚ್ಚರಿಸಿದರು.
,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News