ಬಿಜೆಪಿ ಕಾರ್ಯದರ್ಶಿಯಂತೆ ವರ್ತಿಸುತ್ತಿರುವ ಕಾನೂನು ಸಚಿವರು: ಮೊಯ್ಲಿ ವಾಗ್ದಾಳಿ

Update: 2016-11-27 10:44 GMT

ಹೊಸದಿಲ್ಲಿ, ನ. 27: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಮಾಜಿ ಕಾನೂನು ಸಚಿವ ವೀರಪ್ಪಮೊಯ್ಲಿ ಟೀಕಾಸ್ತ್ರ ಎಸೆದಿದ್ದಾರೆಂದು ವರದಿಯಾಗಿದೆ. "ಜಡ್ಜ್‌ಗಳನ್ನು ನೇಮಿಸುವುದು ಕಾನೂನು ಸಚಿವರ ಕೆಲಸವಾಗಿದೆ. ಆದರೆ ಅವರು ಕಾನೂನು ಮಂತ್ರಿಯಲ್ಲ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಂತೆ ವರ್ತಿಸುತ್ತಿದ್ದಾರೆ" ಎಂದು ವೀರಪ್ಪ ಮೊಯ್ಲಿ ರವಿಶಂಕರ್ ಪ್ರಸಾದ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಜಡ್ಜ್‌ಗಳ ನೇಮಕಾತಿ ನಿಧಾನಗೊಳ್ಳುವುದು ಮತ್ತು ಕೋರ್ಟಿಗೆ ಮೂಲಭೂತ ಸೌಕರ್ಯ ಒದಗಿಸದಿರುವುದಕ್ಕೆ ಸುಪ್ರೀಂಕೋರ್ಟು ಕೇಂದ್ರಸರಕಾರವನ್ನು ತರಾಟೆಗೆತ್ತಿಕೊಂಡಿತ್ತು. ಹೈಕೋರ್ಟಿನಲ್ಲಿ 500 ನ್ಯಾಯಾಧೀಶರ ನೇಮಕಾತಿ ಇನ್ನೂ ಆಗಿಲ್ಲ. ಕೋರ್ಟಿನ ಕೋಣೆಗಳು ಖಾಲಿಯಿವೆ ಎಂದು ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶ ಟಿ.ಎಸ್. ಠಾಕೂರ್ ಹೇಳಿದ್ದರು.

ಆದರೆ 2013ರಲ್ಲಿ 121 ನ್ಯಾಯಾಧೀಶರನ್ನು ನೇಮಕಗೊಳಿಸಿದ ಬಳಿಕ ದೊಡ್ಡ ಮಟ್ಟದ ನೇಮಕಾತಿ ಯನ್ನು ನಡೆಸಲಾಗಿದ್ದು,ಒಟ್ಟು 120 ನ್ಯಾಯಾಧೀಶರನ್ನು ನೇಮಕಗೊಳಿಸಿದ್ದೇವೆಂದು ರವಿಶಂಕರ್ ಪ್ರಸಾದ್ ತಿಳಿಸಿದ್ದರು ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News