ನಯನ ತಾರಾ ಹಿರೋಯಿನ್ ನಂ .1

Update: 2016-11-27 17:53 GMT

ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ನಯನ ತಾರಾ ಈಗ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿಯೆನಿಸಿದ್ದಾಳೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಈ ನಟಿ ಈಗ ತಮಿಳು, ತೆಲುಗಿನಲ್ಲಿ ಅತ್ಯಂತ ಬೇಡಿಕೆಯ ತಾರೆಯಾಗಿದ್ದಾರೆ. ‘ಮಾಯಾ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಯನ ತಾರಾ, ‘ನಾಯಕಿ ಪ್ರಧಾನ’ ಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ತೋರಿಸುತ್ತಿದ್ದಾರೆ.ಇತ್ತೀಚೆಗೆ ಬಿಡುಗಡೆಯಾದ ಕಾಷ್ಮೋರಾ ಚಿತ್ರದಲ್ಲಿ ರಾಣಿಯ ಪಾತ್ರದಲ್ಲಿ ನಯನ್ಸ್ ಅಭಿನಯ ಅಪಾರ ಪ್ರಶಂಸೆ ಗಳಿಸಿದೆ. ಈಗ ಆಕೆ ಇನ್ನೊಂದು ಹಾರರ್ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಅದು ಕೂಡಾ ಸ್ತ್ರೀ ಕೇಂದ್ರಿತ ಚಿತ್ರವಂತೆ.

‘ಬಿಲ್ಲಾ 2’ ಖ್ಯಾತಿಯ ಚಕ್ರಿ ತೊಲೆಟ್ಟಿ ನಿರ್ದೇಶನದ ತಮಿಳು ಥ್ರಿಲ್ಲರ್ ಚಿತ್ರ ‘ಕೊಲಯುದಿರ್ ಕಾಲಮ್’ಗೆ ನಯನತಾರಾ ನಾಯಕಿಯೆಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಈ ಹಾರರ್ ಚಿತ್ರದ ವಿವರಗಳು ಹೊರಬಿದ್ದಿವೆ. ಈಗಾಗಲೇ ನಯನ್ಸ್ ಅಭಿನಯದ ನಾಲ್ಕು ಚಿತ್ರಗಳು ಭರದಿಂದ ಚಿತ್ರೀಕರಣಗೊಳ್ಳುತ್ತಿವೆ. ಒಟ್ಟಿನಲ್ಲಿ 2016ರಲ್ಲಿಯೂ ನಯನತಾರಾ ಕಾಲಿವುಡ್‌ನಲ್ಲಿ ನಂ.1 ಹಿರೋಯಿನ್ ಆಗಿ ತನ್ನ ಪಟ್ಟ ಉಳಿಸಿಕೊಳ್ಳುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News