ಸ್ಯಾಂಡಲ್‌ವುಡ್ ಮಮ್ಮಿ ತಮಿಳಿಗೆ ರಿಮೇಕ್?

Update: 2016-11-27 17:56 GMT

ರಿಯಲ್‌ಸ್ಟಾರ್ ಉಪೇಂದ್ರ ಅವರ ಪತ್ನಿ ಅಭಿನಯಿಸಿರುವ ‘ಮಮ್ಮಿ’ ಡಿಸೆಂಬರ್ 2ರಂದು ತೆರೆಕಾಣುವುದು ಈಗ ಬಹುತೇಕ ಕನ್‌ಫರ್ಮ್ ಆಗಿದೆ. ಕೇವಲ ಟ್ರೇಲರ್ ನಿಂದಲೇ, ಸ್ಯಾಂಡಲ್‌ವುಡ್‌ನ್ನು ಬೆಚ್ಚಿಬೀಳಿಸಿರುವ ಈ ಚಿತ್ರವು ಹಾರರ್ ಕಥಾವಸ್ತುವನ್ನು ಹೊಂದಿದೆ. ಇನ್ನು ಬಿಡುಗಡೆಗೆ ಮುನ್ನವೇ ಮಮ್ಮಿ ಚಿತ್ರತಂಡದಿಂದ ಇನ್ನೊಂದು ಸಿಹಿಸುದ್ದಿ ದೊರೆತಿದೆ. ಬೇರೆಭಾಷೆಗಳ ಚಿತ್ರಗಳನ್ನು ರಿಮೇಕ್ ಮಾಡುವುದು ಸ್ಯಾಂಡಲ್‌ವುಡ್‌ನಲ್ಲಿ ಮಾಮೂಲಿ ವಿಷಯ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಮ್ಮಿ ತಮಿಳಿಗೆ ರಿಮೇಕ್ ಆಗಲು ಹೊರಟಿದೆ. ತಮಿಳಿನ ಜನಪ್ರಿಯ ತಾರಾದಂಪತಿ ಸೂರ್ಯ ಹಾಗೂ ಜ್ಯೋತಿಕಾ. ಈ ಚಿತ್ರವನ್ನು ರಿಮೇಕ್ ಮಾಡಲು ಆಸಕ್ತಿ ವಹಿಸಿದ್ದಾರೆ. ಇವರಿಗಾಗಿ ಇತ್ತೀಚೆಗೆ ನಿರ್ದೇಶಕ ಲೋಹಿತ್ ವಿಶೇಷ ಪ್ರದರ್ಶನವೊಂದನ್ನು ಕೂಡಾ ಏರ್ಪಡಿಸಿದ್ದರು. ಚಿತ್ರವನ್ನು ನೋಡಿ ಜ್ಯೋತಿಕಾ ತುಂಬಾ ಇಂಪ್ರೆಸ್ ಆಗಿದ್ದಾರೆ ಹಾಗೂ ಮಮ್ಮಿಯಲ್ಲಿ ಪ್ರಿಯಾಂಕಾ ನಿರ್ವಹಿಸಿದ್ದ ಪಾತ್ರದಲ್ಲಿ ತಾನೇ ನಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರಂತೆ. ಈ ಚಿತ್ರದ ರಿಮೇಕ್‌ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆಯೆಂಬ ಬಗ್ಗೆ ನಿರ್ಮಾಪಕರು ಇನ್ನೂ ಬಾಯಿಬಿಟ್ಟಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News