ಹಿಂದಿ ಮೀಡಿಯಂ ನಲ್ಲಿ ಇರ್ಫಾನ್

Update: 2016-11-27 18:00 GMT

ಬಾಲಿವುಡ್‌ನಲ್ಲಿ ವಿಭಿನ್ನ ಇಮೇಜ್ ಹೊಂದಿರುವ ಇರ್ಫಾನ್ ಖಾನ್ ಸದ್ಯ ‘ಹಿಂದಿ ಮೀಡಿಯಂ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ದಿಲ್ಲಿಯ ಯುವ ಜೋಡಿಯ ನಡುವೆ ಅರಳುವ ಪ್ರೇಮದ ಕಥೆಯನ್ನು ಹೊಂದಿರುವ ಈ ಚಿತ್ರದ ಬಗ್ಗೆ ಈಗಾಗಲೇ ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿದೆ.

ಎಲ್ಲವೂ ಸರಿಹೋದಲ್ಲಿ ಮುಂದಿನ ವರ್ಷದ ಮಾರ್ಚ್‌ನಲ್ಲಿ ಇಂಗ್ಲಿಷ್ ಮೀಡಿಯಂ ತೆರೆಕಾಣುವ ಸಾಧ್ಯತೆಯಿದೆ.

‘ಪ್ಯಾರ್ ಕೆ ಸೈಡ್ ಎಫೆಕ್ಟ್ಸ್’ ಖ್ಯಾತಿಯ ಸಾಕೇತ್ ಚೌಧುರಿ ನಿರ್ದೇಶನದ ಈ ಚಿತ್ರದಲ್ಲಿ ಪಾಕಿಸ್ತಾನಿ ನಟಿ ಸಬಾ ಕಮರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಬಾಗೆ ಇದು ಚೊಚ್ಚಲ ಹಿಂದಿ ಚಿತ್ರವಾಗಿದೆ. ‘ಮಾಂತೊ’, ‘ಲಾಹೋರ್ ಸೆ ಆಗೆ’ ಮತ್ತಿತರ ಪಾಕ್ ಚಿತ್ರಗಳಲ್ಲಿ ನಟಿಸಿರುವ ಆಕೆ ಕೆಲವು ಟಿವಿ ಧಾರಾವಾಹಿಗಳ ಮೂಲಕವೂ ಅಲ್ಲಿ ಜನಪ್ರಿಯಳಾಗಿದ್ದಾಳೆ.

ಹಿಂದಿ ಮೀಡಿಯಂ ಒಂದು ಲಘು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ದಿಲ್ಲಿಯ ಉನ್ನತ ವಲಯದಲ್ಲಿ ತಮ್ಮ ಅಸ್ತಿತ್ವನ್ನು ತೋರ್ಪಡಿಸಿಕೊಳ್ಳುವ ಯತ್ನದಲ್ಲಿ ಈ ಮುಗ್ಧ ಜೋಡಿ ಅನುಭವಿಸುವ ಪಡಿಪಾಟಲುಗಳ ರಸವತ್ತಾದ ಕಥಾನಕ ಇದಾಗಿದೆಯೆಂದು ಚಿತ್ರತಂಡದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News