×
Ad

ಮಾವೊವಾದಿಗಳ ಎನ್ಕೌಂಟರ್: ಪೊಲೀಸರನ್ನು ಬೆಂಬಲಿಸಿದ ಉಮ್ಮನ್ ಚಾಂಡಿ

Update: 2016-11-29 15:46 IST

ಕೋಝಿಕ್ಕೋಡ್, ನ. 29: ನಿಲಂಬೂರಿನಲ್ಲಿ ಮಾವೊವಾದಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ. ಸ್ವಂತ ಜೀವವನ್ನು ಪಣವಾಗಿಟ್ಟು ಜನರ ರಕ್ಷಣೆಗಾಗಿ ಕೆಲಸಮಾಡುವ ಪೊಲೀಸ್ ಅಧಿಕಾರಿಗಳನ್ನು ಅನಗತ್ಯವಾಗಿ ಟೀಕಿಸುವುದರಲ್ಲಿ ತನಗೆ ಸಹಮತವಿಲ್ಲ ಎಂದು ಚಾಂಡಿ ಹೇಳಿದ್ದಾರೆ.

ಪೊಲೀಸರ ಆತ್ಮವಿಶ್ವಾಸಕ್ಕೆ ಹಾನಿಯಾಗುವಂತಹ ಹೇಳಿಕೆಗಳನ್ನು ನಾನು ನೀಡಲಾರೆ. ದಕ್ಷಿಣಭಾರತ ಮತ್ತಿತರೆಡೆಗಳಲ್ಲಿ ಮಾವೊವಾದಿಗಳು ಸುರಕ್ಷೆಗೆ ಸಂಬಂಧಿಸಿ ಬಹು ದೊಡ್ಡ ಬೆದರಿಕೆಯನ್ನೆಒಡ್ಡುತ್ತಿದ್ದಾರೆ. ಕಾನೂನುಬಾಹಿರವಾದ ಯಾವುದಾದರೂಕೆಲಸ ಪೊಲೀಸರಿಂದಾಗಿದ್ದರೆ ಸರಕಾರ ಕ್ರಮಜರಗಿಸಬಹುದು ಎಂದು ಚಾಂಡಿ ಅಭಿಪ್ರಾಯಿಸಿದ್ದಾರೆ.

ಕೆಲವೊಮ್ಮೆ ಕ್ರಮಜರಗಿಸುವಾಗ ತಪ್ಪುಗಳು ಸಂಭವಿಸಲೂ ಬಹುದು. ಅವುಗಳನ್ನೆಲ್ಲ ಪರಿಶೀಲಿಸಬೇಕಿರುವುದು ಸರಕಾರ. ಸಾರ್ವಜನಿಕರ ಮಧ್ಯೆ ಈ ವಿಷಯವನ್ನು ಚರ್ಚಿಸಿ ಪೊಲೀಸರ ಮನೋಸ್ಥೈರ್ಯವನ್ನು ಕೆಡಿಸುವ ಬಗ್ಗೆ ನನ್ನ ಸಹಮತ ಇಲ್ಲ ಎಂದು ಉಮ್ಮನ್ ಚಾಂಡಿ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News