×
Ad

ಜನರು ಬ್ಯಾಂಕ್ ಕೊಳ್ಳೆ ಹೊಡೆದರೆ ಗುಂಡು ಹಾರಿಸುತ್ತೀರಾ?: ಕೇಂದ್ರವನ್ನು ಪ್ರಶ್ನಿಸಿದ ಶಿವಸೇನೆ

Update: 2016-11-29 17:52 IST

ಮುಂಬೈ, ನವೆಂಬರ್ 29: ನೋಟ್ ಅಮಾನ್ಯ ಕ್ರಮದಿಂದ ಬವಣೆಗೊಳಗಾದ ಜನರು ಬ್ಯಾಂಕ್‌ನ್ನು ಕೊಳ್ಳೆ ಹೊಡೆದರೆ ಅವರ ವಿರುದ್ಧ ಗುಂಡು ಹಾರಿಸುವಿರಾ ಎಂದು ಶಿವಸೇನೆಯ ಮುಖಪತ್ರಿಕೆ ಸಾಮ್ನಾ ಪ್ರಶ್ನಿಸಿದೆ ಎಂದು ವರದಿಯಾಗಿದೆ.

 ಹಣ ಸಮಸ್ಯೆಯನ್ನು ಕೂಡಲೇ ನಿವಾರಿಸಬೇಕು. ಇಲ್ಲದಿದ್ದರೆ ಜನರು ಬ್ಯಾಂಕ್‌ಗಳನ್ನು ಕೊಳ್ಳೆಹೊಡೆಯಲಿದ್ದಾರೆ ಎಂದು ಮರಾಠ ಚಕ್ರವರ್ತಿ ಶಿವಾಜಿಯ ವಂಶಸ್ಥ ಎನ್‌ಸಿಪಿ ಸಂಸದ ಉದಯ ರಾಜ್ ಭೋಸ್ಲೆಯ ಹೇಳಿಕೆಯನ್ನು ಬೆಂಬಲಿಸಿ ಬರೆದ ಸಂಪಾದಕೀಯದಲ್ಲಿ ಸಾಮ್ನಾ ಈ ರೀತಿ ಕೇಂದ್ರವನ್ನು ಪ್ರಶ್ನಿಸಿದೆ.

ಗ್ರಾಮೀಣರು, ರೈತರ ಜೀವನ ನಾಶಗೊಳ್ಳುತ್ತಿದೆ. ಅವರೀಗ ಭಿಕ್ಷೆ ಬೇಡುವವರ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ಸ್ವಾತಂತ್ರ್ಯ ಸಮರ ಕಾಲದಲ್ಲಿ ಸ್ವಾತಂತ್ರ್ಯ ಸೇನಾನಿಗಳು ಬ್ಯಾಂಕ್ ಗಳು ಟ್ರಷರಿಗಳನ್ನು ಕೊಳ್ಳೆ ಹೊಡೆದುದಕ್ಕೆ ಸಮಾನ ಅವಸ್ಥೆಯತ್ತ ಸ್ಥಿತಿಗತಿಗಳು ಹೋಗುತ್ತಿದೆ ಎಂದು ಪತ್ರಿಕೆ ಕೇಂದ್ರ ಸರಕಾರಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದೆ. ಉದಯರಾಜೆ ಭೋಸ್ಲೆ ಜನರೋಷವನ್ನು ತನ್ನ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಕೇಂದ್ರಸರಕಾರದ ನೀತಿ ರೈತರ ಅಕಾಲ ಮರಣದತ್ತೊಯ್ಯುತ್ತಿದೆ. ಹಾಲುತ್ಪನ್ನಗಳನ್ನು ಬೀದಿಗೆ ಚೆಲ್ಲಬೇಕಾದ ಸ್ಥಿತಿಯಿದೆ ಎಂದು ಸಹಾ ಪತ್ರಿಕೆ ಹೇಳಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News