×
Ad

ಗುಜರಾತ್ ಪೌರ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ

Update: 2016-11-29 17:59 IST

ಅಹಮ್ಮದಾಬಾದ್,ನ.29: ಗುಜರಾತ್‌ನ ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಫಲಿತಾಂಶಗಳು ಮಂಗಳವಾರ ಹೊರಬಿದ್ದಿದ್ದು, ಬಿಜೆಪಿ ಭಾರೀ ಗೆಲುವನ್ನು ಸಾಧಿಸಿದೆ. ಉಪ ಚುನಾವಣೆಗಳು ನಡೆದಿದ್ದ 16 ಜಿಲ್ಲೆಗಳಲ್ಲಿನ 126 ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ 109 ಸ್ಥಾನಗಳನ್ನು ಬಿಜೆಪಿ ತನ್ನ ಮಡಿಲಲ್ಲಿ ಹಾಕಿಕೊಂಡಿದೆ. ಅದು ಕಾಂಗ್ರೆಸ್‌ನಿಂದ 40 ಸ್ಥಾನಗಳನ್ನು ಕಸಿದುಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಕೇವಲ 17 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಇತ್ತೀಚಿನ ಮಹಾರಾಷ್ಟ್ರ ಪೌರ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಅದ್ಭುತ ಗೆಲುವನ್ನು ಸಾಧಿಸಿತ್ತು. ಚುನಾವಣೆಗಳು ಸರಕಾರದ ನೋಟು ನಿಷೇಧ ಕ್ರಮದ ಬಳಿಕ ಬಿಜೆಪಿ ಪಾಲಿಗೆ ಸತ್ವಪರೀಕ್ಷೆ ಎಂದೇ ಪರಿಗಣಿಸಲಾಗಿದ್ದು, ಈ ಗೆಲುವುಗಳು ಪಕ್ಷಕ್ಕೆ ನೆಮ್ಮದಿಯನ್ನೊದಗಿಸಿವೆ.

ಗುಜರಾತಿನಲ್ಲಿ ಭಾರೀ ವಿಜಯ ಸಾಧಿಸಿದ್ದಕ್ಕಾಗಿ ಪಕ್ಷವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದಲ್ಲಿ ವಿಶ್ವಾಸ ವ್ಯಕ್ತಪಡಿಸಿರುವುದಕ್ಕಾಗಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಚುನಾವಣಾ ಫಲಿತಾಂಶಗಳು ಜನರು ರಾಷ್ಟ್ರದ ಸರ್ವಾಂಗೀಣ ಪ್ರಗತಿಯ ಪರವಾಗಿದ್ದಾರೆ ಮತ್ತು ಭ್ರಷ್ಟಾಚಾರದ ವಿರುದ್ಧವಾಗಿದ್ದಾರೆ ಎನ್ನುವುದನ್ನು ತೋರಿಸುತ್ತಿವೆ ಎಂದು ಅವರು ಟ್ವೀಟಿಸಿದ್ದಾರೆ.

ಪ್ರಧಾನಿಯವರು ಕೈಗೊಂಡ ಸರ್ಜಿಕಲ್ ದಾಳಿ ಮತ್ತು ನೋಟು ನಿಷೇಧದಂತಹ ಗಂಭೀರ ಕ್ರಮಗಳು ಫಲ ನೀಡಿವೆ ಎನ್ನುವುದಕ್ಕೆ ಚುನಾವಣಾ ಫಲಿತಾಂಶ ಸಂಕೇತ ವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ ರುಪಾನಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News