ರಾಷ್ಟ್ರೀಯ ಯೋಗ ನೀತಿಯ ಬಗ್ಗೆ ನಿರ್ಧರಿಸಲು ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2016-11-29 13:28 GMT

ಹೊಸದಿಲ್ಲಿ, ನ.29: ರಾಷ್ಟ್ರೀಯ ಯೋಗ ನೀತಿಯೊಂದನ್ನು ರಚಿಸಬೇಕು ಹಾಗೂ ದೇಶಾದ್ಯಂತ 1ರಿಂದ 8ನೆ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಯೋಗವನ್ನು ಕಡ್ಡಾಯಗೊಳಿಸಬೇಕೆಂಬ ಮನವಿಗಳ ಕುರಿತು ಮೂರು ತಿಂಗಳೊಳಗಾಗಿ ನಿರ್ಧರಿಸುವಂತೆ ಕೇಂದ್ರ ಸರಕಾರಕ್ಕಿಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಈ ವಿಷಯದಲ್ಲಿ ದಾಖಲಾಗಿರುವ ಅರ್ಜಿಗಳನ್ನು ಒಂದು ನಿಯೋಗವೆಂದು ಪರಿಗಣಿಸಿ ನಿರ್ಧಾರವೊಂದನ್ನು ಕೈಗೊಳ್ಳುವಂತೆ ನ್ಯಾಯಮೂರ್ತಿ ಎಂ.ಬಿ. ಲೋಕೂರ್ ನೇತೃತ್ವದ ಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ನ್ಯಾಯಾಲಯವು ದಿಲ್ಲಿ ಬಿಜೆಪಿ ವಕ್ತಾರ, ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ ಹಾಗೂ ಜೆ.ಸಿ. ಸೇಠ್ ಎಂಬವರು ದಾಖಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿತ್ತು.

ಜೀವಿಸುವ ಹಕ್ಕು, ಶಿಕ್ಷಣದ ಹಕ್ಕು ಹಾಗೂ ಸಮಾನತೆಯ ಹಕ್ಕು ಇತ್ಯಾದಿ ವಿವಿಧ ಮೂಲಭೂತ ಹಕ್ಕುಗಳ ಸ್ಫೂರ್ತಿಯನ್ನು ಗಮನದಲ್ಲಿರಿಸಿ, 1ರಿಂದ 8ನೆ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ ಯೋಗ ಹಾಗೂ ಆರೋಗ್ಯ ಶಿಕ್ಷಣದ ಗುಣಮಟ್ಟದ ಪಠ್ಯಪುಸ್ತಕಗಳನ್ನು ಒದಗಿಸುವಂತೆ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ, ಎನ್‌ಸಿಇಆರ್‌ಟಿ, ಎನ್‌ಸಿಟಿಇ ಹಾಗೂ ಸಿಬಿಎಸ್‌ಇಗಳಿಗೆ ನಿರ್ದೇಶನ ನೀಡುವಂತೆ ಉಪಾಧ್ಯಾಯ ತನ್ನ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News