×
Ad

ಆಮಿರ್‌ಖಾನ್ ಪತ್ನಿ ಕಿರಣ್ ರಾವ್ ಮನೆಯಿಂದ ರೂ.53 ಲಕ್ಷದ ಚಿನ್ನ ಕಾಣೆ

Update: 2016-11-29 23:59 IST

 ಮುಂಬೈ, ನ.29: ಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರ ಬಾಂದ್ರಾದ ನಿವಾಸದಿಂದ ರೂ.53 ಲಕ್ಷ ವೌಲ್ಯದ ಚಿನ್ನಾಭರಣ ಕಾಣೆಯಾಗಿರುವ ಕುರಿತ ದೂರೊಂದರ ತನಿಖೆಯನ್ನು ಖಾರ್‌ನ ಪೊಲೀಸರು ನಡೆಸುತ್ತಿದ್ದಾರೆ.

ರಾವ್ ಅವರ ಸಂಬಂಧಿಯೊಬ್ಬರು ಸಲ್ಲಿಸಿರುವ ದೂರನ್ನು ಆಧರಿಸಿ ಪೊಲೀಸರು ಐಪಿಡಿಯ ಸೆ 453ರನ್ವಯ(ಮನೆಯಿಂದ ಕಳವು ಇತ್ಯಾದಿ) ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ.
ರಾವ್, ನಟ ಆಮಿರ್ ಖಾನ್‌ರನ್ನು ವಿವಾಹವಾಗಿದ್ದು, ಇಬ್ಬರೂ ಕಾರ್ಟರ್ ರೋಡ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದಾರೆ.
ತನ್ನ ಮಲಗುವ ಕೋಣೆಯಿಂದ ಒಂದು ಉಂಗುರ ಹಾಗೂ ಒಂದು ವಜ್ರದ ನೆಕ್ಲೆಸ್ ಕಾಣೆಯಾಗಿರುವುದು ಕಳೆದ ವಾರ ರಾವ್ ಅವ ಗಮನಕ್ಕೆ ಬಂದಿತ್ತು. ಆ ಬಳಿಕ ಅವರ ಸಂಬಂಧಿಯೋರ್ವರು ಖಾರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
 ದೂರಿನ ಪ್ರತಿ ‘ಮಿಡ್‌ಡೇಗೆ’ ಲಭ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆಗಾಗಿ ರಾವ್ ಅವರಿಗೆ ಕರೆ ಮಾಡಿದಾಗ ಅವರೂ ಲಭ್ಯರಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸದಿರುವ ಶರ್ತದೊಂದಿಗೆ ಈ ಬೆಳವಣಿಗೆಗಳನ್ನು ಖಚಿತಪಡಿಸಿದ್ದಾರೆ.
ಮನೆಗೆಲಸದವರೇ ಪ್ರಧಾನ ಶಂಕಿತರೆಂದು ಪೊಲೀಸರು ಪರಿಗಣಿಸಿದ್ದು, ಕಳೆದ 5 ದಿನಗಳಿಂದ ಅವರಲ್ಲಿ ಮೂವರ ವಿಚಾರಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News