ಬಾಲಿವುಡ್‌ನ ಮಾದಕ ಗಾಯಕ ಅರಿಜಿತ್ ಸಿಂಗ್ ವಿದಾಯ?

Update: 2016-11-30 08:46 GMT

2005ರ ಪ್ರಸಿದ್ಧ ರಿಯಾಲಿಟಿ ಶೋ ಫೇಮ್ ಗುರುಕುಲ್ ಗೆಲ್ಲಲು ಸಾಧ್ಯವಾಗದೆ ಇದ್ದರೂ ಅರ್ಜಿತ್ ಸಿಂಗ್ ಧೀರ್ಘ ಸಮಯದ ಕಠಿಣ ಪ್ರಯತ್ನದ ಬಳಿಕ ಯಶಸ್ಸನ್ನು ಕಂಡವರು. ಉದ್ಯಮದಲ್ಲಿ ನೆಲೆಯೂರಲು ಆರು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದ ಅರ್ಜಿತ್ ಸಿಂಗ್ ಶಂಕರ್ ಎಹಸಾನ್ ಲಾಯ್ ಮತ್ತು ಪ್ರೀತಂ ಅವರು ಸಂಗೀತ ನಿರ್ದೇಶನ ನೀಡಿದ್ದ ಮರ್ಡರ್ 2ನಲ್ಲಿ ದೊಡ್ಡ ಬ್ರೇಕ್ ಪಡೆದಿದ್ದರು.

ಅವರ "ಫಿರ್ ಮೊಹಬ್ಬತ್" ಹಾಡು ಕ್ಷಣ ಮಾತ್ರದಲ್ಲಿ ಸೂಪರ್ ಹಿಟ್ ಆಯಿತು. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಧೀರ್ಘಕಾಲ ಹಾಡುತ್ತೇನೆ ಎಂದು ನನಗೆ ಅನಿಸುವುದಿಲ್ಲ. ಇದು ನನ್ನ ಕೊನೆಯ ವರ್ಷವೂ ಆಗಿರಬಹುದು. ಬಾಲಿವುಡ್‌ನಲ್ಲಿ ಪ್ರತೀ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಹೊಸ ಗಾಯಕರು ಹಳಬರನ್ನು ಹಿಂದೆ ದೂಡುತ್ತಾರೆ" ಎಂದು ಹೇಳಿದ್ದಾರೆ. ಆದರೆ ತಮ್ಮಂಥ ಹಾಡುಗಾರರು ಈ ಟ್ರೆಂಡ್ ಬದಲಿಸಬಹುದು ಎಂದೂ ಅವರು ಹೇಳಿದ್ದಾರೆ. ನಾನು ಈ ಪ್ರವೃತ್ತಿ ಬದಲಿಸಬಹುದು. ನಿರ್ದಿಷ್ಟ ಜನರ್‌ಗಳ ಮೇಲೆ ನಾನು ಕಠಿಣ ಶ್ರಮ ಪಟ್ಟಲ್ಲಿ ಧೀರ್ಘ ಕಾಲ ಉಳಿಯಬಹುದು. ಆ ಜನರ್‌ಗಳ ಹಾಡನ್ನು ಹಾಡುವ ಒಬ್ಬನೇ ವ್ಯಕ್ತಿ ನಾನಾಗಿದ್ದರೆ ಅದು ಸಾಧ್ಯ. ಆ ಮೂಲಕ ನಾನು ಅಸ್ತಿತ್ವ ಉಳಿಸಿಕೊಳ್ಳಬಹುದು ಎಂದಿದ್ದಾರೆ.

ಮಾಧ್ಯಮದಿಂದ ದೂರವಾಗಿರಲು ಕಾರಣ ಕೇಳಿದರೆ, "ನನಗೆ ಶಾಂತ ಜೀವನ ಇಷ್ಟ. ಹೆಚ್ಚು ಮಧ್ಯಪ್ರವೇಶ ಇಷ್ಟವಿಲ್ಲ. ಕಳೆದ ಮೂರು ವರ್ಷಗಳಲ್ಲಿ ನನ್ನ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಆದರೆ ನಾನು ಸಂಭಾಷಣೆಯಲ್ಲಿ ಹೆಚ್ಚು ಭಾಗಿಯಾಗುವ ವ್ಯಕ್ತಿಯಲ್ಲ, ಶಾಂತ ಜೀವನ ಬಯಸುತ್ತೇನೆ ಎಂದು ಅವರು ತಿಳಿದುಕೊಳ್ಳುವುದು ಅಗತ್ಯ. ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯಿಂದ ಇದೂ ಕಷ್ಟವಾಗಿದೆ" ಎನ್ನುತ್ತಾರೆ.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News