ಏನಿದು GPT-5.2? ಇದರಿಂದ ಉದ್ಯಮದಲ್ಲಿ ಏನು ಬದಲಾವಣೆ ತರಲಿದೆ?
ಸಾಂದರ್ಭಿಕ ಚಿತ್ರ | Photo Credit : freepik
ವೃತ್ತಿಪರ ಕೆಲಸಗಳನ್ನು ಹೆಚ್ಚು ಉತ್ತಮವಾಗಿ ನಡೆಸುವ ಸಾಮರ್ಥ್ಯ ಹೊಂದಿದ GPT- 5.2 ಅನ್ನು ಇದೀಗ Open AI ಬಿಡುಗಡೆ ಮಾಡಿದೆ. ಇದು Open AIನ ಪ್ರತಿಸ್ಪರ್ಧಿಯಾಗಿರುವ Google ನ Gemini 3ಯ ಬಿಡುಗಡೆಯ ನಂತರ ಬಂದಿರುವ ಹೊಸ ಆವೃತ್ತಿಯಾಗಿದೆ.
ಇಂದು ಮಾಹಿತಿ, ವಿಚಾರ ಮತ್ತು ಗ್ರಹಿಕೆ ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳಿಂದ ತೊಡಗಿ ವೃತ್ತಿಪರರವರೆಗೆ ಸಾಮಾನ್ಯ ಮಾಹಿತಿಯಿಂದ ಆರಂಭಿಸಿ ವೃತ್ತಿಪರ ಮಾಹಿತಿಯವರೆಗೆ AI ಚಾಟ್ ಬಾಟ್ ಗಳನ್ನು ಅವಲಂಬಿಸಿದ್ದಾರೆ. ಇಂತಹ ಅವಲಂಬನೆಯ ಸಂದರ್ಭದಲ್ಲಿ ವೃತ್ತಿಪರರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಸಮರ್ಥ ಮತ್ತು ವಿಶ್ವಸನೀಯವಾದ ಹೊಸ ಆವೃತ್ತಿಯನ್ನು Open AI ಹೊರತಂದಿದೆ.
Open AI ಈ ಮೊದಲು ChatGPT -4 ಮತ್ತು ChatGPT 4.0 ಅನ್ನು ಉಚಿತವಾಗಿ ಬಳಕೆಗೆ ನೀಡಿದೆ. ಅದರ ನಂತರದ ಆವೃತ್ತಿಗಳು ಪೇಯ್ಮೆಂಟ್ ಮೋಡ್ ನಲ್ಲಿವೆ. ಇದೀಗ ವೃತ್ತಿಪರರಿಗಾಗಿಯೇ Open AI ತನ್ನ ಹೊಸ ಅವೃತ್ತಿ GPT-5.2 ಅನ್ನು ಬಿಡುಗಡೆ ಮಾಡಿದೆ. Open AI ಹೇಳುವ ಪ್ರಕಾರ ಹೊಸ ಮಾಡೆಲ್ ವೃತ್ತಿಪರ ಜ್ಞಾನದ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ಉದ್ಯಮಿಗಳಿಗೆಂದೇ ರೂಪಿಸಲಾಗಿರುವ ವೈಜ್ಞಾನಿಕ ಆವಿಷ್ಕಾರವೆಂದು ಹೇಳಿಕೊಂಡಿದೆ. ಈಗಿನ ಆವೃತ್ತಿ ವಿಜ್ಞಾನ ಮತ್ತು ಗಣಿತ ಎರಡರಲ್ಲೂ ನಡೆಸಿರುವ ಪರೀಕ್ಷೆಗಳಲ್ಲಿ ಸೈ ಎನಿಸಿಕೊಂಡಿದೆ.
ಏನಿದು GPT-5.2?
GPT-5.2 ಹೆಚ್ಚು ವೇಗ ಮತ್ತು ಸಮರ್ಥವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಪೇಯ್ಮೆಂಟ್ ಮೋಡ್ ನಲ್ಲಿಯೇ ಇರಿಸಲಾಗಿದೆ. ವೃತ್ತಿಪರರಿಗೆ ಹೆಚ್ಚು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ದೀರ್ಘ ದಾಖಲೆಗಳು, ಚೆಕ್ ಕೋಡ್, ಡ್ರಾಫ್ಟ್ ಪ್ರೆಸೆಂಟೇಶನ್, ಸ್ಪ್ರೆಡ್‌ಶೀಟ್ ಗಳಲ್ಲಿ ಡಾಟಾ ಸಂಗ್ರಹ ಇತ್ಯಾದಿ ಕೆಲಸಗಳನ್ನು ಮಾಡಲು ನೀವು AI ಬಳಸುತ್ತಿದ್ದರೆ, ಈ ಹೊಸ ಮಾಡೆಲ್ ಮಾನವರು ಮಾಡುವಂತೆಯೇ ಕೆಲಸ ಮಾಡಬಲ್ಲದು.
ChatGPT ಎಂಟರ್ಪ್ರೈಸ್ ಬಳಸುತ್ತಿರುವವರು ತಮ್ಮ ನಿತ್ಯದ ಕೆಲಸದ ಅವಧಿಯಲ್ಲಿ ಒಂದು ಗಂಟೆಗಳಷ್ಟು ಕಡಿತ ಮಾಡಿದ್ದಾರೆ. ಅತಿಯಾಗಿ ಬಳಸುವವರು ವಾರಕ್ಕೆ 10 ಗಂಟೆಗಳನ್ನು ಉಳಿಸುತ್ತಿದ್ದಾರೆ. ಇದೀಗ GPT-5.2 ಬಳಸಿದರೆ ಇನ್ನಷ್ಟು ಸಮಯ ಉಳಿಸಬಹುದು.
ಮುಖ್ಯವಾಗಿ ಹೇಳಬೇಕೆಂದರೆ ಇದನ್ನು ತುರ್ತು ಪ್ರಶ್ನೆಗಳಿಗಾಗಿ ವಿನ್ಯಾಸಗೊಳಿಸಲಾಗಿಲ್ಲ. ಬದಲಾಗಿ ನಿತ್ಯ ಜೀವನದ ಕೆಲಸದಲ್ಲಿ AI ಬಳಸುವವರಿಗೆ ನೆರವಾಗಲು ಅಭಿವೃದ್ಧಿಪಡಿಸಲಾಗಿದೆ.
ನಿಯಮಿತ ChatGPTನಲ್ಲಿ GPT-5.2 ಮೂರು ಆವೃತ್ತಿಯಲ್ಲಿ ಬರುತ್ತದೆ- ಇನ್ಸ್ಟಂಟ್, ಥಿಂಕಿಂಗ್ ಮತ್ತು ಪ್ರೊ. ‘ಇನ್ಸ್ಟಂಟ್’ ನಿತ್ಯದ ಕೆಲಸಗಳಿಗೆ ವೇಗದ ಪ್ರತಿಸ್ಪಂದನೆ ನೀಡುತ್ತದೆ. ‘ಥಿಂಕಿಂಗ್’ ಸಂಕೀರ್ಣ ಕೆಲಸಕ್ಕೆ ಹೆಚ್ಚು ರಚನಾತ್ಮಕ ಮತ್ತು ವಿವರವಾದ ಕಾರಣಗಳನ್ನು ತಿಳಿಸುತ್ತದೆ. ‘ಪ್ರೊ’ ತಾಂತ್ರಿಕ ಸಮಸ್ಯೆಗಳಿಗೆ ಅತ್ಯುನ್ನತ ಗುಣಮಟ್ಟದ ಪರಿಹಾರಗಳನ್ನು ಒದಗಿಸುತ್ತದೆ.
GPT-5.2 ಕಾರ್ಯನಿರ್ವಹಣೆ
Open AI ಹೇಳುವ ಪ್ರಕಾರ, GPT-5.2 ಹಣಕಾಸು, ಮಾರಾಟ, ವಿನ್ಯಾಸ, ಎಂಜಿನಿಯರಿಂಗ್ ಮೊದಲಾಗಿ 44 ನಿಜ ಜೀವನದ ವೃತ್ತಿಗಳಲ್ಲಿ AI ಹೇಗೆ ಕೆಲಸ ಮಾಡುತ್ತದೆ ಎನ್ನುವ ಪರೀಕ್ಷೆಯಲ್ಲಿ ಇದು ಉತ್ತೀರ್ಣಗೊಂಡಿದೆ. ವಿವರವಾಗಿ ಹೇಳುವುದಾದರೆ ಥಿಂಕಿಂಗ್ ಆವೃತ್ತಿಯು ಸಮಕಾಲೀನ ಉದ್ಯಮದ ವೃತ್ತಿಪರರನ್ನು ಶೇ 70.9ರಷ್ಟು ಕೆಲಸದಲ್ಲಿ ಸರಿಹೊಂದಿಸಿದೆ ಅಥವಾ ಮೀರಿಸಿದೆ. ಅಂದರೆ GPT-5ಗೆ ಹೋಲಿಸಿದರೆ ಇದು ದುಪ್ಪಟ್ಟು ಪ್ರಮಾಣವಾಗಿದೆ.
ಕೋಡಿಂಗ್ ವಿಚಾರಕ್ಕೆ ಬಂದರೆ ಇದು ನಾಲ್ಕು ಪ್ರೋಗ್ರಾಂಮಿಂಗ್ ಭಾಷೆಗಳಲ್ಲಿ ನಿಜ ಜೀವನದ ಎಂಜಿನಿಯರಿಂಗ್ ಕಾರ್ಯಗಳಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಈ ಮಾಡೆಲ್ ಡಿಬಗ್ಗಿಂಗ್, ಫೀಚರ್ಗಳನ್ನು ಅನುಷ್ಠಾನಗೊಳಿಸುವುದು, ಕೋಡ್ ವಿಮರ್ಶೆ ಮತ್ತು ಒಟ್ಟು ಇಂಜಿನಿಯರಿಂಗ್ ಕೆಲಸಗಳನ್ನು ನಿಭಾಯಿಸುವಲ್ಲಿ ಹೆಚ್ಚು ಸಮರ್ಥವಾಗಿದೆ. ಹೊಸ ಮಾಡೆಲ್ ಪರೀಕ್ಷಿಸಿದ ಡೆವಲಪರ್ಗಳ ಪ್ರಕಾರ ಮುನ್ನೆಲೆಯ ಕಾರ್ಯಗಳನ್ನು ಅತ್ಯುತ್ತಮವಾಗಿ ಮಾಡುತ್ತದೆ.
ಪಠ್ಯ ಸಂಸ್ಕರಣೆ ಮತ್ತು ಮಲ್ಟಿ ಟಾಸ್ಕಿಂಗ್
ಹೊಸ ಮಾಡೆಲ್ ನೂರಾರು ಮತ್ತು ಸಾವಿರಾರು ಟೋಕನ್ ಗಳ ಅಡಿಯಿಂದಲೂ ಮಾಹಿತಿ ಹೆಕ್ಕಿ ಕೊಡಬಲ್ಲದು. ಪ್ರಸ್ತುತ ಮಾಹಿತಿಯನ್ನು ಬೃಹತ್ ಕಡತಗಳ ಅಡಿಯಲ್ಲಿ ಬಚ್ಚಿಟ್ಟಾಗಲೂ ಈ ಮಾಡೆಲ್ ಹೆಕ್ಕಿ ತೆಗೆದುಕೊಟ್ಟಿದೆ. ಪರೀಕ್ಷೆಯಲ್ಲಿ ಇದು ಸಂಕೀರ್ಣ ಗ್ರಾಹಕ-ಸೇವಾ ಪರಿಸ್ಥಿತಿಗಳನ್ನೂ ನಿಭಾಯಿಸಿದೆ. ಪ್ರಯಾಣವನ್ನು ಮರುಬುಕ್ ಮಾಡುವುದು, ಲಗೇಜ್ ಪತ್ತೆಹಚ್ಚುವುದು, ಹೊಟೇಲ್ ವ್ಯವಸ್ಥೆಗೊಳಿಸುವುದು ಮತ್ತು ಮೆಡಿಕಲ್ ಸೀಟ್ ಗೆ ವಿನಂತಿಸುವುದು ಇತ್ಯಾದಿ ಕೆಲಸವನ್ನು ಸ್ವತಃ ನಿಭಾಯಿಸಿದೆ.
ಹೀಗಾಗಿ ಒಪ್ಪಂದಗಳು, ಸಂಶೋಧನಾ ವರದಿಗಳು, ಕಾನೂನು ದಾಖಲೆಗಳು, ಟ್ರಾನ್ಸ್ಕ್ರಿಪ್ಟ್ ಗಳು ಅಥವಾ ಇತರ ಬಹುಕಡತಗಳ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಈ ಮಾಡೆಲ್ ಆದರ್ಶಮಯವಾಗಿದೆ. ಇದರ ವಿಷನ್ ಕೂಡ ಚೆನ್ನಾಗಿದೆ. ಚಾರ್ಟ್ ಗಳು, ಡ್ಯಾಶ್‌ಬೋರ್ಡ್ ಗಳು, ತಾಂತ್ರಿಕ ಡಯಾಗ್ರಾಮ್ ಗಳು, ಯುಐ ಸ್ಕ್ರೀನ್‌ಶಾಟ್‌ಗಳು ಮತ್ತು ಕಡಿಮೆ ಗುಣಮಟ್ಟದ ಚಿತ್ರಗಳನ್ನೂ ಅರ್ಥಮಾಡಿಕೊಳ್ಳಬಲ್ಲದು.
GPT-5.2 ಅತ್ಯಾಧುನಿಕ ವೈಜ್ಞಾನಿಕ ಮತ್ತು ಗಣಿತೀಯ ರೀಸನಿಂಗ್ ನಲ್ಲಿ ಹೆಚ್ಚು ಸಮರ್ಥವಾಗಿದೆ. ಪದವಿ ಮಟ್ಟದ ವಿಜ್ಞಾನ ಪ್ರಶ್ನೆಗಳಿಗೆ ಶೇ 92ರಷ್ಟು ನಿಖರವಾಗಿ ಉತ್ತರ ನೀಡಿದೆ.
Open AIಗೆ ಇದು ಎಷ್ಟು ಅಗತ್ಯ?
ಪ್ರತಿಸ್ಪರ್ಧಿ Google ನಿಂದ OpenAI ಸಂಸ್ಥೆ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಿದೆ. ChatGPTಯ ಪ್ರತಿಸ್ಪರ್ಧಿಯಾಗಿರುವ Google ಇದೀಗ Gemini 3 ಘೋಷಿಸಿದ ನಂತರ Open AI ಮೇಲೆ ಒತ್ತಡವಿತ್ತು. Gemini 3ರ ಯಶಸ್ಸಿನ ನಂತರ Open AI ಸಂಸ್ಥೆಯೊಳಗೆ ಬಹಳ ತುರ್ತು ಅಭಿವೃದ್ಧಿಯ ಅಗತ್ಯವಿದೆ ಎನ್ನುವ ಸಂದೇಶ ರವಾನಿಸಲಾಗಿತ್ತು. ಹೀಗಾಗಿ GPT-5.2 ಯಶಸ್ಸು Open AIಗೆ ಬಹುಮುಖ್ಯವಾಗುತ್ತದೆ.