×
Ad

ನಕ್ಸಲರ ಎನ್‌ಕೌಂಟರ್: ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ- ವಿಎಸ್

Update: 2016-11-30 16:09 IST

ತಿರುವನಂತಪುರಂ, ನ. 30: ನಿಲಂಬೂರ್ ಮಾವೋವಾದಿಗಳನ್ನು ಎನ್‌ಕೌಂಟರ್ ನಡೆಸಿ ಕೊಂದು ಹಾಕಿದ ಘಟನೆಯಲ್ಲಿ ತಪ್ಪಿತಸ್ಠರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯುತಾನಂದನ್ ಆಗ್ರಹಿಸಿದ್ದಾರೆಂದು ವರದಿಯಾಗಿದೆ. ವಿಎಸ್ ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಪತ್ರ ನೀಡಿದ್ದಾರೆ. ನಕಲಿ ಎನ್‌ಕೌಂಟರ್ ಸಿಪಿಎಂ ನೀತಿಯಲ್ಲ ಎಂದು ಮುಖ್ಯಮಂತ್ರಿಗೆ ಪತ್ರದಲ್ಲಿ ಅವರು ನೆನಪಿಸಿದ್ದಾರೆಎನ್ನಲಾಗಿದೆ.

 ಕೊಲೆಕೃತ್ಯಕ್ಕೆ ಸಂಬಂಧಿಸಿ ನಿಗೂಢತೆ ಬಾಕಿಉಳಿದಿದೆ ಎಂದು ವಿಎಸ್ ಹೇಳಿದ್ದು, ವಿವರಗಳನ್ನು ರಹಸ್ಯವಾಗಿರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕೊಲೆಯಾದವರಪೋಸ್ಟ್‌ಮಾರ್ಟಂಗೆ ಸಂಬಂಧಿಸಿದ ಕೆಲವು ಸತ್ಯಸಂಗತಿಗಳು ಈಗ ಜನರಿಗೆ ಗೊತ್ತಾಗಿದೆ. ಅದು ನಡುಕ ಹುಟ್ಟಿಸುವ ಮಾಹಿತಿಗಳಾಗಿವೆ. ನಕಲಿ ಎನ್‌ಕೌಂಟರ್ ಭಾರತದಲ್ಲಿ ಹಲವು ಕಡೆಗಳಲ್ಲಿ ನಡೆದಿವೆ. ಇದರ ವಿರುದ್ಧ ಬಲವಾದ ನಿಲುವನ್ನು ಕೈಗೊಂಡ ಪಾರ್ಟಿ ಸಿಪಿಎಂ ಅಗಿದೆ. ಈ ನೀತಿಗೆ ಸರಿಹೊಂದದ ಕೃತ್ಯ ಪೊಲೀಸರಿಂದಾಗಿದೆ. ತಪ್ಪು ಆಶಯವನ್ನು ಪ್ರಚಾರ ಮಾಡುತ್ತಿರುವವರನ್ನು ಕೊಲ್ಲುವುದು ಪರಿಹಾರವಲ್ಲ. ಅವರೊಂದಿಗೆ ಚರ್ಚೆ ನಡೆಸಬೇಕಾಗಿದೆ.

ಮಾವೋವಾದಿಗಳ ಸಂರಕ್ಷರಲ್ಲಿ ಯಾರೂ ಉನ್ನತರಿಲ್ಲ. ದಲಿತರು ಆದಿವಾಸಿಗಳ ಒಂದು ಚಿಕ್ಕ ವಿಭಾಗವದು. ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News