ಜಿಷಾ ಹತ್ಯಾ ಪ್ರಕರಣ: ತನಿಖೆಗೆ ಪ್ರಾಯೋಗಿಕ ಅಡ್ಡಿ ಇದೆ-ಸಿಬಿಐ
Update: 2016-11-30 16:10 IST
ಕೊಚ್ಚಿ,ನ. 30: ಜಿಷಾ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವುದು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಅದು ಹೈಕೋರ್ಟಿಗೆ ತಿಳಿಸಿದೆ. ತನಿಖೆ ಪೂರ್ತಿಗೊಳಿಸಿ ಆರೋಪ ಪಟ್ಟಿ ಸಲ್ಲಿಸಲಾದ ಪ್ರಕರಣದಲ್ಲಿ ಮತ್ತೊಂದು ತನಿಖೆ ನಡೆಸುವುದು ಈಗ ಪ್ರಸಕ್ತವಲ್ಲ. ಆದ್ದರಿಂದ ಕೇಸು ವಹಿಸಿಕೊಳ್ಳಲು ಪ್ರಾಯೋಗಿಕ ಅಡ್ಡಿಯಿದೆ ಎಂದು ಸಿಬಿಐ ಕೋರ್ಟಿಗೆತಿಳಿಸಿದೆಎಂದು ವರದಿಯಾಗಿದೆ. ಜಿಷಾ ಪ್ರಕರಣದ ಮರುತನಿಖೆ ನಡೆಸಬೇಕೆಂದು ಆಗ್ರಹಿಸಿ ಜಿಷಾತಂದೆ ಪಾಪ್ಪು ಹೈಕೋರ್ಟಿನ ಮೊರೆ ಹೋಗಿದ್ದಾರೆ. ಅವರ ಅರ್ಜಿಗೆ ಸಂಬಂಧಿಸಿ ಸಿಬಿಐತನ್ನ ನಿಲುವನ್ನು ಕೋರ್ಟಿಗೆ ತಿಳಿಸಿದೆ. ಅರ್ಜಿಗೆ ಸಂಬಂಧಿಸಿ ಕೇರಳ ಸರಕಾರದ ಅಭಿಪ್ರಾಯವನ್ನು ಕೇಳಿರುವ ಹೈಕೋರ್ಟುಅರ್ಜಿ ಪರಿಗಣನೆಯ ವಿಚಾರವನ್ನು ಡಿಸೆಂಬರ್ ಏಳಕ್ಕೆ ಮುಂದೂಡಿದೆ. ಸಾಕ್ಷ್ಯ ಸಂಗ್ರಹ ಸಹಿತ ಗಂಭೀರವಾದ ಪ್ರಮಾದಗಳು ಈಗಿನ ತನಿಖೆಯಲ್ಲಿ ತನಿಖಾಧಿಕಾರಿಗಳಿಂದಾಗಿವೆ ಎಂದು ಬೆಟ್ಟು ಮಾಡಿ ಜಿಷಾ ತಂದೆ ಪಾಪ್ಪು ಹೈಕೋರ್ಟಿನ ಮೊರೆಹೋಗಿದ್ದಾರೆಂದು ವರದಿ ತಿಳಿಸಿದೆ.