ಒಂದು ರೂ.ನೋಟಿಗೆ ಇಂದಿಗೆ 100 ವರ್ಷ !

Update: 2016-11-30 11:42 GMT

ಕೋಯಮತ್ತೂರ್, ನ. 30: ಒಂದು ರೂಪಾಯಿ ಭಾರತದ ನೋಟಿಗೆ ನೂರುವರ್ಷ ಪೂರ್ತಿಯಾಗಿದೆ. 1917 ನವೆಂಬರ್ 30ಕ್ಕೆ ಪ್ರಥಮ ಒಂದುರೂಪಾಯಿನೋಟು ಹೊರಬಂದಿತ್ತು. ಮೊದಲ ಒಂದುರೂಪಾಯಿ ನೋಟಿನಲ್ಲಿ ಬಿಟಿಷ್ ದೊರೆ ಐದನೇ ಜಾರ್ಜ್‌ರ ಫೋಟೊ ಪ್ರಕಟವಾಗಿತ್ತು. 1935ರ ಎಪ್ರಿಲ್ ಒಂದಕ್ಕೆ ನೋಟುಗಳನ್ನುಮುದ್ರಿಸುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವಹಿಸಿಕೊಡಲಾಗಿತ್ತು. ಆನಂತರ ಹೊರಬಂದ ಒಂದು ರೂಪಾಯಿ ನೋಟುಗಳಲ್ಲಿ ಎಂಟು ಭಾಷೆಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.

1940ರ ನೋಟುಗಳಲ್ಲಿ ದೊರೆ ಆರನೆ ಜಾರ್ಜ್‌ನ ಚಿತ್ರವಿತ್ತು. ಸ್ವಾತಂತ್ರ್ಯಾನಂತರದ ಭಾರತದ ನೋಟುಗಳಿಗೆ ಹೆಚ್ಚಿನ ಸ್ವಾಗತ ಸಿಕ್ಕಿತ್ತು. 1949ರಲ್ಲಿ ಅಂದಿನ ಕೇಂದ್ರ ವಿತ್ತ ಸಚಿವಾಲಯದ ಕಾರ್ಯದರ್ಶಿ ಕೆ. ಆರ್.ಕೆ. ಮೆನನ್ ರೆ ಹಸ್ತಾಕ್ಷರವಿತ್ತು. ಬ್ರಿಟಿಷ್ ದೊರೆಗಳ ಫೋಟೊ ತೆರವು ಗೊಳಿಸಲಾಯಿತು. 1994ರಲ್ಲಿ ಒಂದು ರೂಪಾಯಿ ನೋಟು ಮುದ್ರಣ ನಿಲ್ಲಿಸಲಾಯಿತು. 1951ರಲ್ಲಿ ಹಿಂದಿ ಭಾಷೆಯ ಬರಹ ಇರುವ ನೋಟುಗಳನ್ನು ಹೊರಡಿಸಲಾಯಿತು. 1994ರನಂತರ ನೋಟಿನ ಬದಲಿಗೆ ನಾಣ್ಯ ಚಾಲನೆಗೆ ಬಂತು. ಬೇರೆ ನೋಟುಗಳಿಗೆ ಹೋಲಿಸುವಾಗ ಒಂದು ರೂಪಾಯಿ ನೋಟಿಗೆ ಹೆಚ್ಚಿನ ವಿಶೇಷತೆಗಳಿದ್ದವು. ಇತರ ನೋಟುಗಳಲ್ಲಿದ್ದ promise to pay the bearer a sum of xxx rupee ಎಂಬ ವಾಕ್ಯ ಒಂದು ರೂಪಾಯಿಯ ನೋಟುಗಳಲ್ಲಿರಲಿಲ್ಲ. ಇತರ ನೋಟುಗಳಲ್ಲಿ ರಿಸರ್ವ್‌ಬ್ಯಾಂಕ್ ಆಫ್ ಇಂಡಿಯಾ ಎಂದಿದ್ದರೆ ಒಂದು ರೂಪಾಯಿ ನೋಟಿನಲ್ಲಿ ಗಮರ್ನಮೆಂಟ್ ಆಫ್ ಇಂಡಿಯಾ ಎಂದು ಇಂಗ್ಲಿಷ್‌ನಲ್ಲಿ ಭಾರತ್ ಸರಕಾರ್ ಎಂದು ಹಿಂದಿಯಲ್ಲಿಯಾ ಬರೆಯಲಾಗಿತ್ತು. ಒಂದು ರೂಪಾಯಿ ನೋಟಿನಲ್ಲಿ ಕೇಂದ್ರ ವಿತ್ತ ಸಚಿವಾಲಯದ ಕಾರ್ಯದರ್ಶಿ ಮತ್ತು ಇತರ ನೋಟುಗಳಲ್ಲಿ ಆರ್‌ಬಿಐ ಗವರ್ನರ್ ಸಹಿಹಾಕುತ್ತಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News