ಬ್ಯಾಂಕ್ ಖಾತೆ ವಿವರ ಸಲ್ಲಿಕೆಗೆ ಸೂಚನೆ ಇನ್ನೂ ಬಂದಿಲ್ಲವೆಂದ ಬಿಜೆಪಿಯ ಮುಖ್ಯಮಂತ್ರಿ

Update: 2016-11-30 14:17 GMT

 ಪಣಜಿ: ನ.8ರ ನಂತರದ ಬ್ಯಾಂಕ್ ವಹಿವಾಟಿನ ವಿವರಗಳನ್ನು ಸಲ್ಲಿಸುವಂತೆ ಯಾವುದೇ ಸೂಚನೆ ತನಗಿನ್ನೂ ಬಂದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ಅವರು ಬುಧವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಆದರೆ ಪಕ್ಷದ ಎಲ್ಲ ಸೂಚನೆಗಳಿಗೆ ತಾನು ವಿಧೇಯನಾಗಿದ್ದೇನೆ ಎಂದು ಹೇಳಿದರು.

ನ.8ರ ನಂತರದ ತಮ್ಮ ಎಲ್ಲ ಬ್ಯಾಂಕ್ ವಹಿವಾಟುಗಳ ವಿವರಗಳನ್ನು ಪಕ್ಷಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬಿಜೆಪಿ ಸಂಸದರು ಮತ್ತು ಶಾಸಕರಿಗೆ ಸೂಚಿಸಿದ್ದರು.

ಪ್ರತಿ ವರ್ಷ ನಾವು ಆದಾಯ ತೆರಿಗೆ ಇಲಾಖೆ ಮತ್ತು ಲೋಕಾಯುಕ್ತರಿಗೂ ರಿಟರ್ನ್‌ಗಳನ್ನು ಸಲ್ಲಿಸುತ್ತಿದ್ದೇವೆ. ಮೋದಿಯವರ ಸೂಚನೆಯ ಕುರಿತು ಮಾಧ್ಯಮಗಳಿಂದ ಕೇಳಿದ್ದೇನೆ. ಆದರೆ ಅಂತಹ ಸೂಚನೆ ತನಗಿನ್ನೂ ಬಂದಿಲ್ಲ ಎಂದ ಅವರು, ಇದು ಅತ್ಯಂತ ಒಳ್ಳೆಯ ಕೆಲಸ. ಪ್ರತಿಯೊಬ್ಬರೂ ವಿವರಗಳನ್ನು ಸಲ್ಲಿಸಬೇಕು. ಪಕ್ಷದ ಸೂಚನೆಗಳೇನೇ ಇರಲಿ,ಅವುಗಳನ್ನು ನಾವು ಪಾಲಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News