ಮಹಿಳೆಯರಿಂದ ಮೊದಲ ಲಕ್ನೊ ಮೆಟ್ರೊ ಚಾಲನೆ!

Update: 2016-12-01 14:15 GMT

ಲಕ್ನೊ, ಡಿ.1: ಲಕ್ನೊ ಮೆಟ್ರೊ ರೈಲು ಕಾನ್ಪುರದ ರಸ್ತೆಯ ಎತ್ತರಿಸಿದ ಮಾರ್ಗದಲ್ಲಿ ಗುರುವಾರ ಮೊದಲ ಪ್ರಯೋಗಾರ್ಥ ಸಂಚಾರ ನಡೆಸಿದೆ. ಆದ್ಯತಾ ವಿಭಾಗದಲ್ಲಿ ಇಬ್ಬರು ಮಹಿಳೆಯರು ರೈಲನ್ನು ಮುನ್ನಡೆಸುತ್ತಿದ್ದುದು ಲಕ್ನೊವಾಸಿಗಳಿಗೆ ಹೆಮ್ಮೆಯ ಕ್ಷಣವಾಗಿತ್ತು.

ಮಹಿಳೆಯರಿಗೆ ಉನ್ನತ ತಂತ್ರಜ್ಞಾನದ ಮೆಟ್ರೊ ರೈಲನ್ನು ನಿಭಾಯಿಸುವ ತಮ್ಮ ಸಾಮರ್ಥ್ಯವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲು ಅವಕಾಶ ನೀಡುವ ಪ್ರಜ್ಞಾಪೂರ್ವಕ ನಿರ್ಧಾವನ್ನು ಲಕ್ನೊ ಮೆಟ್ರೊ ರೈಲು ಕೈಗೊಂಡಿದೆ.

ಮೊದಲ ಬಾರಿಗೆ ಮುಖ್ಯಮಂತ್ರಿ ಹಾಗೂ ಸಾರ್ವಜನಿಕರ ಮುಂದೆ ಮೆಟ್ರೊ ರೈಲನ್ನು ಚಲಾಯಿಸಲು ಇಬ್ಬರು ಮಹಿಳೆಯರನ್ನು ತಾವು ಆರಿಸಿದ್ದೆವು. ತಮ್ಮ ರೈಲು ಚಾಲಕಿಯರು ಪ್ರಯೋಗಾರ್ಥ ಓಡಾಟದ ನಾಯಕಿಯರಾಗಲು ಬಯಸಿದ್ದವರಂತೆ ಆತ್ಮವಿಶ್ವಾಸ ಹಾಗೂ ಉತ್ಕಂಠತೆಯಿಂದ ರೈಲನ್ನು ಚಲಾಯಿಸಿದರು. ಅವರಿಬ್ಬರೂ ಎಲ್‌ಎಂಆರ್‌ಸಿ ತರಬೇತಿ ಕೇಂದ್ರ ಹಾಗೂ ದಿಲ್ಲಿ ಮೆಟ್ರೊಗಳಲ್ಲಿ ಕಠಿಣ ತರಬೇತಿ ಪಡೆದಿದ್ದಾರೆಯೆಂದು ಲಕ್ನೊ ಮೆಟ್ರೊದ ಆಡಳಿತ ನಿರ್ದೇಶಕ ಕುಮಾರ್ ಕೇಶವ್ ತಿಳಿಸಿದ್ದಾರೆ.

ಪ್ರತಿಭಾ ಹಾಗೂ ಪ್ರಾಚಿ ಶರ್ಮಾ ಎಂಬವರು ಈ ಚಾಲಕಿಯರಾಗಿದ್ದು, ಇಬ್ಬರೂ ಅಲಹಾಬಾದ್‌ನವರಾಗಿದ್ದಾರೆ. ಪ್ರತಿಭಾ ಬರೇಲಿಯ ಎಸ್‌ಆರ್‌ಎಂಎಸ್‌ಸಿಇಟಿಯಿಂದ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದರೆ, ಪ್ರಾಚಿ ಅಲಹಾಬಾದ್‌ನ ಐಇಆರ್‌ಟಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಅವರಿಬ್ಬರೂ, ಜೂ.9ರಂದು ನಿಲ್ದಾಣ ನಿಯಂತ್ರಕರು ಹಾಗೂ ರೈಲು ನಿರ್ವಾಹಕಿಯರಾಗಿ ಎಲ್‌ಎಂಆರ್‌ಸಿಗೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News