ಸೌದಿ : ಈಗ ಮರುಭೂಮಿಯಲ್ಲ, ಹಿಮಭೂಮಿ !

Update: 2016-12-02 09:02 GMT

ಸೌದಿ ಅರೇಬಿಯಗೆ ಈ ಸಮಯದಲ್ಲಿ ನೀವು ಹೋದರೆ ಮರುಭೂಮಿಯ ಸಫಾರಿಗೆ ಹೋಗುವ ಬದಲಾಗಿ ಹಿಮದಲ್ಲಿ ಮಿಂದು ಬರಲು ಸಿದ್ಧರಾಗಿ.

ದೇಶದ ಉತ್ತರ ಪ್ರಾಂತಗಳಲ್ಲಿ ಉಷ್ಣತೆಯು -3 ಡಿಗ್ರಿಗೆ ಇಳಿದಿರುವ ಕಾರಣದಿಂದ ಸೌದಿ ಅರೇಬಿಯ ಈಗ ಹಿಮಚ್ಛಾದಿತವಾಗಿದೆ. ಅಕ್ಟೋಬರ್‌ನಲ್ಲಿ ಈ ಪ್ರಾಂತದಲ್ಲಿ ಸ್ವಲ್ಪ ಮಳೆಯಾಗುತ್ತದೆ. ಈ ಮಳೆ ನಿರಂತರವಾಗಿ ಬೀಳಲು ಆರಂಭಿಸಿದೆ. ಪ್ರತೀ ಚಳಿಗಾಲದಲ್ಲಿ ಈ ಮರುಭೂಮಿ ಹಿಮಚ್ಛಾದಿತವಾಗುವುದಿಲ್ಲ. ಹೀಗಾಗಿ ಈ ಅಪರೂಪದ ಅವಕಾಶವನ್ನು ಖುಷಿಯಿಂದ ಸೌದಿ ಜನರು ಸ್ವೀಕರಿಸಿದ್ದಾರೆ.

ಕಾಸಿಮ್ ವಿಶ್ವವಿದ್ಯಾಲಯದ ವಾತಾವರಣ ವಿಜ್ಞಾನದ ಪ್ರೊಫೆಸರ್ ಅಬ್ದುಲ್ಲಾ ಅಲ್ ಮುಸ್ನದ್ ಅವರು ಹೇಳಿರುವ ಪ್ರಕಾರ ಇದು ಈ ಋತುವಿನ ಎರಡನೇ ಹಿಮಮಳೆಯಾಗಿದೆ. ಮಳೆಗಾಲ ಮುಗಿದು 40 ದಿನಗಳು ಕಳೆದರೂ ಹಿಮಮಳೆ ಮುಂದುವರಿದಿದೆ. ಕಳೆದ ವರ್ಷ ಸೌದಿ ಅರೇಬಿಯದಲ್ಲಿ ಏಪ್ರಿಲ್‌ನಲ್ಲಿ ಪ್ರವಾಹ ಬಂದು 18 ಮಂದಿ ಪ್ರಾಣ ಕಳೆದುಕೊಂಡಿದ್ದರು.

ದಮ್ಮಾಮ್, ಧಹ್ರಾನ್, ಖೋಬರ್ ಮತ್ತು ಕಾತಿಫ್‌ನ ನಗರಪಾಳಿಕೆಗಳು ಚರಂಡಿ ನಿಲ್ದಾಣಗಳು ಮತ್ತು ಮಳೆ ನೀರನ್ನು ಸಂಗ್ರಹಿಸಲು ಟಾಂಕ್‌ಗಳನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ. ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದ ರಸ್ತೆಗಳನ್ನು ರಕ್ಷಿಸಲು ಎಲ್ಲಾ ಸಿದ್ಧತೆ ನಿರೀಕ್ಷಿಸಲಾಗಿದೆ. ಆದರೆ ಸದ್ಯ ಸೌದಿಯ ಮಂದಿ ಆಕಸ್ಮಿಕ ಹವಾಮಾನ ಬದಲಾವಣೆಗೆ ಖುಷಿಪಡುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲೂ ಅಪರೂಪದ ಹಿಮಕ್ಕೆ ಖುಷಿಯ ಜೊತೆಗೆ ಭಯವೂ ವ್ಯಕ್ತವಾಗಿದೆ. ವಾತಾವರಣ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ.

ಕೃಪೆ: http://www.hindustantimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News