ದಿಲ್ಲಿಯಲ್ಲಿ ಅಮೆರಿಕನ್ ಯುವತಿಯ ಸಾಮೂಹಿಕ ಅತ್ಯಾಚಾರ

Update: 2016-12-03 11:13 GMT

ಹೊಸದಿಲ್ಲಿ, ಡಿ. 3: ಅಮೆರಿಕನ್ ಯುವತಿ ದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಟೂರಿಸ್ಟ್ ಗೈಡ್ ಸಹಿತ ಐವರು ಸೇರಿ ಅತ್ಯಾಚಾರ ನಡೆಸಿದ್ದಾರೆಂದು ಇಮೇಲ್ ಮೂಲಕ ಯುವತಿ ದೂರು ನೀಡಿದ್ದಾರೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ದಿಲ್ಲಿಯ ಕನಾಟ್‌ಪ್ಲೇಸ್‌ನ ಸಮೀಪದ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಯುವತಿಯನ್ನು ಅತ್ಯಾಚಾರ ನಡೆಸಲಾಗಿದೆ. ಘಟನೆಯನ್ನುವಿವರಿಸಿ ಯುವತಿ ದಿಲ್ಲಿ ಪೊಲೀಸ್ ಕಮೀಶನ್‌ರ ಅಧಿಕೃತ ಇಮೇಲ್‌ಗೆ ದೂರು ಕಳುಹಿಸಿದ್ದಾರೆ. 2016 ಮಾರ್ಚ್‌ತಿಂಗಳಲ್ಲಿ ಈ ಘಟನೆ ನಡೆದಿತ್ತು.

ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಯುವತಿಗೆ ಅವಳು ವಾಸವಿದ್ದ ಹೊಟೇಲ್ ಮುಖೇನ ಲಭಿಸಿದ ಟೂರಿಸ್ಟ್ ಗೈಡ್‌ನೊಂದಿಗೆ ದಿಲ್ಲಿಯ ವಿವಿಧ ಸ್ಥಳಗೆ ಭೇಟಿ ನೀಡಿದ್ದಳು. ಘಟನೆ ನಡೆದ ದಿವಸ ಇನ್ನೂ ನಾಲ್ವರೊಂದಿಗೆ ಕೋಣೆಗೆ ಬಂದ ಗೈಡ್ ಅವರೊಂದಿಗೆ ಸೇರಿ ಯುವತಿಯನ್ನು ಅತ್ಯಾಚಾರಕ್ಕೆ ಗುರಿಪಡಿಸಿದ್ದಾನೆ ಎನ್ನಲಾಗಿದೆ.

ಘಟನೆಯ ನಂತರ ಮಾನಸಿಕವಾಗಿ ನೊಂದ ಯುವತಿ ಅಮೆರಿಕಕ್ಕೆ ಮರಳಿ ಹೋಗಿದ್ದರು. ನಂತರ ಭಾರತದ ಒಂದು ಸ್ವಯಂ ಸೇವಾ ಸಂಘಟನೆಗೆ ತನಗಾದ ಕೆಟ್ಟ ಅನುಭವವನ್ನು ಆಕೆ ಹೇಳಿದ್ದಾಳೆ. ಅವರ ಸೂಚನೆ ಪ್ರಕಾರ ಯುವತಿ ದೂರು ನೀಡಿದ್ದಾರೆ. ಯುವತಿ ನೀಡಿದ ದೂರನ್ನು ಪರಿಗಣಿಸಿದ ಕನ್ನಾಟ್‌ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News