2.0 ಚಿತ್ರೀಕರಣದಲ್ಲಿ ರಜನೀಕಾಂತ್‌ಗೆ ಗಾಯ

Update: 2016-12-04 03:55 GMT

ಚೆನ್ನೈ, ಡಿ.4: ಬಹುನಿರೀಕ್ಷೆಯ 2.0 ಚಿತ್ರದ ಚಿತ್ರೀಕರಣ ವೇಳೆ ಮೇರುನಟ ರಜನೀಕಾಂತ್ ಗಾಯಗೊಂಡಿದ್ದಾರೆ.

ಪೂರ್ವ ಕರಾವಳಿ ರಸ್ತೆಯ ಕೆಳಂಬಕ್ಕಮ್ ಬಳಿ ರಾತ್ರಿ 8 ಗಂಟೆ ವೇಳೆಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಬಿದ್ದು 65 ವರ್ಷದ ರಜನೀಕಾಂತ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಬಲಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News