×
Ad

ನೋಟು ರದ್ದತಿಯಿಂದಾಗಿ ಸಿಂಪಲ್ಲಾಗ್ ಒಂದು ಮದುವೆ !

Update: 2016-12-04 10:20 IST

ಹೊಸದಿಲ್ಲಿ, ಡಿ.4: ಸುಮಾರು ಹತ್ತು ಸಾವಿರ ಅತಿಥಿಗಳು. ಅವರೆಲ್ಲರೂ ವಿವಿಐಪಿಗಳು. ಕೇಂದ್ರ ಸಚಿವ ರಾಜ್‌ನಾಥ್‌ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಉದ್ಯಮಿಗಳಾದ ಮುಕೇಶ್‌ ಅಂಬಾನಿ ಮತ್ತು ರತನ್ ಟಾಟಾ, ಶಿವ ಸೇನಾ ಮುಖ್ಯಸ್ಥ ಉದ್ಧವ್‌  ಠಾಕ್ರೆ, ಕೇಂದ್ರ ಸಚಿವರುಗಳು, ಮುಖ್ಯ ಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಐವತ್ತು ಬಾಡಿಗೆ ವಿಮಾನಗಳಲ್ಲಿ ಇಂದು ಸಂಜೆ ನಗರದಿಂದ ನಾಗ್ಪುರಕ್ಕೆ ತೆರಳಲಿದ್ದಾರೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಣ್ಯರು ವಿಮಾನಗಳಲ್ಲಿ ಪ್ರಯಾಣಿಸಲಿದ್ದಾರೆ.

ಈ ಕಾರಣದಿಂದಾಗಿ ದೇಶದ ಯಾವುದೇ ಭಾಗದಿಂದ ವಿಮಾನದಲ್ಲಿ  ನಾಗ್ಪುರಕ್ಕೆ ಪ್ರಯಾಣಿಸಲು ಡಿ.3 ಮತ್ತು 4ರಂದು ಸಿಗಲಾರದು. ಐವತ್ತು ವಿಮಾನಗಳನ್ನು ಕಾಯ್ದಿರಿಸಲಾಗಿದೆ. ವಿಮಾನದಲ್ಲಿ ತೆರಳಲಿರುವ ವಿವಿಐಪಿಗಳ  ಪಟ್ಟಿಯಲ್ಲಿ ಇನ್ನೂ ಹಲವರಿದ್ದಾರೆ. ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ, ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಿಹಾರದ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌, ಫಿಲ್ಮ್ ಸ್ಟಾರ‍್ಸ್ ಗಳಾದ ಹೇಮಾ ಮಾಲಿನಿ ಮತ್ತು ಅಮಿತಾಭ್‌ ಬಚ್ಚನ್‌, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್‌,  ಉದ್ಯಮಿ ಕುಮಾರ ಮಂಗಳಂ ಬಿರ್ಲಾ ಮತ್ತಿತರರು ಇದ್ದಾರೆ.

ನಾಗ್ಪುರದ ವರ್ಧಾ ರಸ್ತೆಯಲಿರುವ ರಾಣಿ ಕೋಥಿಯಲ್ಲಿ ಗಡ್ಕರಿ ಕಿರಿಯ ಮಗಳು ಕೆಟ್ಕಿ ಮತ್ತು ಆದಿತ್ಯ(ಸಂಧ್ಯಾ- ರವೀಂದ್ರ ಕಾಸ್ಕೇಡಿಕರ್‌ ಮಗ) ಇವರ ಮದುವೆ ನೆರವೇರಲಿದೆ. ವರ ಆದಿತ್ಯ ಅಮೆರಿಕದಲ್ಲಿ ಸಾಮಾಜಿಕ ಜಾಲಾ ತಾಣ ಫೇಸ್‌ಬುಕ್‌ ಗ್ರೂಪ್‌ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. 

ನೆರವೇರಲಿದೆ. ವರ ಆದಿತ್ಯ ಅಮೆರಿಕದಲ್ಲಿ ಸಾಮಾಜಿಕ ಜಾಲಾ ತಾಣ ಫೇಸ್‌ಬುಕ್‌ ಗ್ರೂಪ್‌ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. 
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ ಹಳೆಯ  ಐನೂರು ಮತ್ತು ಸಾವಿರ ರೂ. ನೋಟುಗಳ ಮೇಲೆ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ  ಕೈಯಲ್ಲಿ ಚಲಾವಣೆಗೆ ಹಣವಿಲ್ಲದೆ ಹಲವು ಮದುವೆಗಳು ನಿಂತಿದೆ. ಬ್ಯಾಂಕ್ ನಲ್ಲಿ ಹಣವಿದ್ದರೂ ಜನಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿಲ್ಲ. ದುಂದು ವೆಚ್ಚದ ಮದುವೆಗೆ ಮೋದಿ ಕಡಿವಾಣ ಹಾಕಿದ್ದಾರೆ. ಆದರೆ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿರುವ ಗಡ್ಕರಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮಗಳ ಮದುವೆ ನೆರವೇರಿಸಲು ಯಾವುದೇ ಸಮಸ್ಯೆ ಎದುರಾಗದಿರುವುದು ವಿಶೇಷ ! ಇಂತಹ ಮದುವೆ ಬಗ್ಗೆ ಆರ್‌ಎಸ್ ಎಸ್ ಮತ್ತು ಪ್ರಧಾನಿ ಮೋದಿ ಏನು ಹೇಳುತ್ತಾರೋ  ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News