×
Ad

ಪಂಜಾಬ್‌ನ ಅಮೃತಸರದಲ್ಲಿ ಹಾರ್ಟ್ ಆಫ್‌ ಏಷ್ಯಾ ಸಮಾವೇಶಕ್ಕೆ ಚಾಲನೆ

Update: 2016-12-04 12:38 IST

ಹೊಸದಿಲ್ಲಿ, ಡಿ.4: ಭಯೋತ್ಪಾದನೆ ವಿರುದ್ಧ ಎಲ್ಲರೂ ಹೋರಾಟ ನಡೆಸಿದರೆ ಭಯೋತ್ಪಾದನೆಯನ್ನು ಬುಡಸಮೇತ ತೊಲಗಿಸಲು ಸಾಧ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಅಮೃತಸರದಲ್ಲಿ ಹಾರ್ಟ್ ಆಫ್‌ ಏಷ್ಯಾ ಸಮಾವೇಶಕ್ಕೆ ಅವರು ಇಂದು ಬೆಳಗ್ಗೆ   ಚಾಲನೆ ನೀಡಿ ಮಾತನಾಡಿದರು.
ಅಫ್ಘಾನಿಸ್ತಾನದಲ್ಲಿ ಉಗ್ರರ ಉಪಟಳ ಮಿತಿ ಮೀರಿದೆ.ಉಗ್ರರನ್ನು ಸದೆಬಡಿಯಲು ಅಫ್ಘಾನಿಸ್ತಾನಕ್ಕೆ ಭಾರತ ಸಹಕಾರ ನೀಡಲಿದೆ ಎಂದು ಮೋದಿ ಹೇಳಿದರು.
ಅಫ್ಘಾನಿಸ್ತಾನದಲ್ಲಿ ಸಂಸತ್‌  ಭವನ  ನಿರ್ಮಾಣಕ್ಕೆ ಭಾರತ ಸಹಕಾರ ನೀಡಿದೆ.ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸೌಹಾರ್ಧ  ಸಂಕೇತವಾಗಿ ಅಫ್ಘಾನಿಸ್ತಾನದ ಸಂಸತ್‌ ಭವನ ನಿರ್ಮಾಣಗೊಂಡಿದೆ. ಭಾರತ ಅಫ್ಘಾನಿಸ್ತಾನ ಸಂಬಂಧ ವೃದ್ಧಿಗೆ ಸಕಲ ಕ್ರಮವನ್ನು ಕೈಗೊಳ್ಳಲಾಗುವುದು  ಭದ್ರತಾ ಕ್ಷೇತ್ರದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು.  
ಮಹತ್ವದ ಸಮಾವೇಶದಲ್ಲಿ ನಲುವತ್ತು ರಾಷ್ಟ್ರಗಳು ಪಾಲ್ಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News