×
Ad

ಕಾರು ಹರಿದು ಒಂದೇ ಕುಟುಂಬದ ಮೂವರ ಮೃತ್ಯು

Update: 2016-12-04 13:26 IST

ವಾಟ್ಟುಪುಝ, ಡಿ. 4: ಮೇಡಕ್ಕಡಂಬ್ ಭಗವತಿ ದೇವಳದಲ್ಲಿಪೂಜೆ ಮುಗಿಸಿ ಮರಳುತ್ತಿದ್ದವರ ಮೇಲೆ ಕಾರು ಹರಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತರಾದ ದಾರುಣ ಘಟನೆ ನಿನ್ನೆ ರಾತ್ರಿ 9:30ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ. ಕೊಚ್ಚಿ ಮಧುರೆ ರಾಷ್ಟ್ರೀಯ ಹೆದ್ದಾರಿಯ ಮೂವಾಟ್ಟುಪುಝ ವಾಳಗಂ ಪಂಚಾಯತ್ ಆಫೀಸ ಬಳಿ ದುರ್ಘಟನೆ ನಡೆದಿದ್ದು ಮೂವಾಟ್ಟುಪುಝ ಮೇಕ್ಕಡಂಬ್ ಆನಕುತ್ತದ ಪರಮೇಶ್ವರನ್‌ರ ಪತ್ನಿ ರಾಧ(60), ಪುತ್ರ ಪ್ರವೀಣ್‌ರ ಪತ್ನಿ ರಜಿತಾ(28), ಪ್ರವೀಣ್‌ನ ಮಗಳು ನಿವೇದ್ಯ(4) ಮೃತರಾಗಿದ್ದಾರೆ.

ಪ್ರವೀಣ್ ಸಹೋದರಿ ಪ್ರಿಜ(32), ಮಕ್ಕಳಾದ ಅಂಬಾಡಿ(5), ಶ್ರೇಯ(8) ಇವರು ಗಾಯಗೊಂಡಿದ್ದಾರೆ.

ಮೃತರಾದ ರಾಧ ಮತ್ತು ಗಾಯಗೊಂಡ ಮೊಮ್ಮಗಳು ಶ್ರೇಯ ಇಂದು ಬೆಳಗ್ಗೆ ಶಬರಿಮಲೆ ಯಾತ್ರೆಗೆ ತೆರಳುವವರಿದ್ದರು. ಇದಕ್ಕೆ ಮುಂಚಿತವಾಗಿ ದೇವಳಕ್ಕೆ ಪೂಜೆಗೆ ಹೋಗಿದ್ದು ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅಪಘಾತ ನಡೆಸಿದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕನ ನಿಯಂತ್ರಣ ಕಳೆದು ಕೊಂಡ ಕಾರು ನಡೆದು ಹೋಗುತ್ತಿರುವ ಕುಟುಂಬದ ಮೇಲೆ ಹರಿದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News