×
Ad

ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್‌ನಿಂದ ಕೋಚ್ ವಿರುದ್ಧ ಅತ್ಯಾಚಾರ ಆರೋಪ !

Update: 2016-12-04 14:05 IST

ಹೊಸದಿಲ್ಲಿ, ಡಿ. 4: ರಾಷ್ಟ್ರೀಯ ಮಟ್ಟದ ಮಹಿಳಾ ಶೂಟಿಂಗ್ ಪಟು ತನ್ನದೆ ಕೋಚ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಘಟನೆ ವರದಿಯಾಗಿದೆ. ಮಹಿಳಾ ಕ್ರೀಡಾಪಟು ನವೆಂಬರ್ ಹನ್ನೆರಡನೆ ತಾರೀಕು ತನ್ನ ಹುಟ್ಟಿದ ಹಬ್ಬದ ದಿನ ಆರೋಪಿ ಕೋಚ್ ಅತ್ಯಾಚಾರವೆಸಗಿದ್ದಾನೆಂದು ಪೊಲೀಸರಿಗೆದೂರು ನೀಡಿದ್ದಾಳೆ. ತನಗೆ ಆರೋಪಿ ಎರಡು ವರ್ಷಗಳಿಂದ ಪರಿಚಯವಿರುವ ವ್ಯಕ್ತಿಯೆಂದು ಅವಳು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾಳೆ.

ಅವರಿಬ್ಬರೂ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯ(ಸಾಯಿ)ದ ಶೂಟಿಂಗ್ ರೇಂಜ್‌ನಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್‌ಗಾಗಿ ಅಭ್ಯಾಸ ನಡೆಸುತ್ತಿದ್ದರು. ಆರೋಪಿ ಕೂಡಾ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕಾಗಿ ಸಿದ್ಧತೆ ನಡೆಸುತ್ತಿದ್ದ ಎನ್ನಲಾಗಿದೆ. ಈ ಮಹಿಳಾ ಆಟಗಾರ್ತಿಗೆ ಕೋಚಿಂಗ್‌ನ್ನು ಕೂಡಾ ನೀಡುತ್ತಿದ್ದ. ಅವರಿಬ್ಬರಲ್ಲಿಉತ್ತಮ ಸಂಬಂಧವಿತ್ತು. ಆರೋಪಿ ಮಹಿಳಾ ಆಟಗಾರ್ತಿಯನ್ನು ವಿವಾಹವಾಗುವುದಾಗಿ ಹೇಳುತ್ತಿದ್ದ. ಹೀಗೆ ಅವಳ ಜನ್ಮದಿನದ ಸಂದರ್ಭದಲ್ಲಿ ಕೋಚ್ ಅವಳನ್ನು ಅಭಿನಂದಿಸಲು ಚಾಣಕ್ಯಪುರಿಯ ಅವಳ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಕೋಚ್ ಮಾದಕ ಪದಾರ್ಥವನ್ನು ಶೀತಳ ಪಾನೀಯದಲ್ಲಿ ಬೆರೆಸಿದ್ದ. ನಂತರ ಅವಳು ಅಪ್ರಜ್ಞಾವಸ್ಥೆಗೆ ಹೋಗಿದ್ದಾಗ ಕೋಚ್ ಅವಳನ್ನು ಅತ್ಯಾಚಾರವೆಸಗಿದ್ದಾನೆಂದು ಮಹಿಳಾ ಶೂಟರ್ ತನ್ನ ದೂರಿನಲ್ಲಿ ತಿಳಿಸಿದ್ದಾಳೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News