×
Ad

ಕರಣ್ ಜೋಹರ್ ಘೋಷಿಸಿದ್ದಾರೆ ಭಾರತದ ಪ್ರಪ್ರಥಮ...

Update: 2016-12-05 18:05 IST

 ಕರಣ್ ಜೋಹರ್ ಅವರು ಎಎ ಫಿಲ್ಮ್ಸ್ ಜೊತೆಗೂಡಿ ಭಾರತದ ಮೊದಲ ಸಾಗರ ಯುದ್ಧಕ್ಕೆ ಸಂಬಂಧಿಸಿದ ಸಿನಿಮಾವಾಗಿರುವ ‘ದಿ ಗಾಜಿ ಅಟಾಕ್‌’ ನಿರ್ದೇಶನಕ್ಕೆ ಸಿದ್ಧವಾಗಿದ್ದಾರೆ. 44 ವರ್ಷದ ನಿರ್ದೇಶಕ ಭಾರತೀಯ ನೌಕಾಯಾನ ದಿನದಂದೇ ತಮ್ಮ ಹೊಸ ಸಿನಿಮಾದ ಸುದ್ದಿ ನೀಡಿದ್ದು, ಮುಂದಿನ ವರ್ಷ ಫೆಬ್ರವರಿ 17ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದಿದ್ದಾರೆ.

 ಧರ್ಮಾ ಪ್ರೊಡಕ್ಷನ್ ಎಎ ಫಿಲ್ಸ್ ಜೊತೆಗೂಡಿ ‘ದಿ ಗಾಜಿ ಅಟಾಕ್‌’ ಎನ್ನುವ ಭಾರತದ ಮೊದಲ ಸಾಗರಯುದ್ಧ ಸಿನಿಮಾವನ್ನು ತಯಾರಿಸುತ್ತಿದೆ ಎಂದು ತಮ್ಮ ಸಿನಿಮಾದ ಪೋಸ್ಟರ್ ಅನ್ನು ಅವರು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು ‘ದಿ ಗಾಜಿ ಅಟಾಕ್‌’ ಸಿನಿಮಾ 2017 ಫೆಬ್ರವರಿ 17ರಂದು ಬಿಡುಗಡೆಯಾಗುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಈ ಸಿನಿಮಾದಲ್ಲಿ ರಾಣಾ ದುಗ್ಗುಪತ್ತಿ ನಟಿಸುತ್ತಿರುವ ಸುದ್ದಿಯನ್ನೂ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ ತಿಳಿಸಿದೆ. ನೀವು ಈವರೆಗೆ ಕೇಳದೆ ಇರುವ ಯುದ್ಧದ ಸಿನಿಮಾವನ್ನು ಮುಂದಿಡುತ್ತಿದ್ದೇವೆ ಎಂದು ಧರ್ಮಾ ಪ್ರೊಡಕ್ಷನ್ ಟ್ವಿಟರ್ ಖಾತೆ ಹೇಳಿದೆ.

ಕೃಪೆ: timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News