ಜಯಲಲಿತಾ ನಿಧನದ ಸುದ್ದಿಯನ್ನು ನಿರಾಕರಿಸಿದ ಅಪೋಲೋ ಆಸ್ಪತ್ರೆ

Update: 2016-12-05 12:50 GMT

ಚೆನ್ನೈ, ಡಿ. 5 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಿಗೇ ಈ ಸುದ್ದಿಯನ್ನು ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆ ನಿರಾಕರಿಸಿದೆ. 

ತಮಿಳು ಮಾಧ್ಯಮಗಳು ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿದ್ದಾರೆ ಎಂದು ಮೊದಲು ವರದಿ ಮಾಡಿದವು . ಬಳಿಕ ಇಂಗ್ಲಿಷ್  ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿದವು. ಎಐಎಡಿಎಂಕೆ ಕೂಡ ತನ್ನ ಪ್ರಧಾನ ಕಚೇರಿಯ ಧ್ವಜವನ್ನು ಅರ್ಧ ಮಟ್ಟಕ್ಕೆ ಇಳಿಸಿತ್ತು. ಆದರೆ ಆಸ್ಪತ್ರೆ ಮಾತ್ರ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದೆ. 
ಅಪೋಲೋ ಹಾಗು ದಿಲ್ಲಿಯ ಏಮ್ಸ್ ನ ವೈದ್ಯರ ತಂಡ ಜಯಲಲಿತಾ ಅವರನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಅಪೋಲೋ ಆಸ್ಪತ್ರೆ ಟ್ವೀಟ್ ಮಾಡಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News