ನೋಟು ರದ್ದತಿಯಿಂದ ಸರಕಾರಕ್ಕೆ ನಿಜವಾಗಿ ಆಗುವ ಲಾಭ ಎಷ್ಟು ?

Update: 2016-12-05 14:38 GMT

ಹೊಸದಿಲ್ಲಿ, ಡಿ.5: ನವೆಂಬರ್ 8ರಂದು ನೋಟು ರದ್ದತಿ ಘೋಷಿಸಿದ ಬಳಿಕ ರೂ. 500 ಹಾಗೂ 1000ದ ಎಷ್ಟು ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲಾರವೆಂಬುದು ತೀರ್ವ ನಿರೀಕ್ಷೆಯ ವಿಷಯವಾಗಿದೆ. ರೂ. 2.5 ಲಕ್ಷ ಕೋಟಿ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲಾರದೆಂಬುದು ಎಸ್‌ಬಿಐಯ ಆರ್ಥಿಕ ಸಂಶೋಧನ ಇಲಾಖೆಯ ನಿರೀಕ್ಷೆಯಾಗಿದೆ.

ಎಸ್‌ಬಿಐ ಅಂದಾಜಿನ ಪ್ರಕಾರ, ನ.8ರ ಮೊದಲು ಚಲಾವಣೆಯಲ್ಲಿದ್ದ ರೂ. 15.5 ಲಕ್ಷ ಕೋಟಿ ಮೊತ್ತದ ದೊಡ್ಡ ನೋಟುಗಳಲ್ಲಿ ರೂ. 13 ಲಕ್ಷ ಕೋಟಿ ಮೊತ್ತದ ನೋಟುಗಳಷ್ಟೇ ಬ್ಯಾಂಕ್‌ಗಳಲ್ಲಿ ಠೇವಣಿಯಾಗಬಹುದು. ಅಂದರೆ, ಸುಮಾರು 2.5 ಲಕ್ಷ ಕೋಟಿ ಮೊತ್ತದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲಾರವೆಂದು ವರದಿಯೊಂದರಲ್ಲಿ ಬ್ಯಾಂಕ್ ಹೇಳಿದೆ.

ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಾರದ ರೂ. 2.5 ಲಕ್ಷ ಕೋಟಿಯಲ್ಲಿ, ಉದಾಹರಣೆಗೆ ಕಾನೂನು ಬಾಹಿರ ಚಟುವಟಿಕೆಯಿಂದಾಗಿ ಹಿಂದೆ ಬಾರದ ಮೊತ್ತ ಸುಮಾರು ರೂ. 1.5 ಲಕ್ಷ ಕೋಟಿ ಆಗಿರುವ ಸಾಧ್ಯತೆಯಿದೆಯೆಂದು ಅದು ತಿಳಿಸಿದೆ.

ರೂ. 1.5 ಲಕ್ಷ ಕೋಟಿಯನ್ನು ವ್ಯಕ್ತಿಗಳು ಘೋಷಿಸಲಾರರು ಹಾಗೂ ಇದು ಶುದ್ಧವಾಗಿ ನಾಶವಾದ ಕರೆನ್ಸಿ ಹೊಣೆಗಾರಿಕೆಯಾಗಲಿದೆಯೆಂದು ತಾವು ಖಚಿತವಾಗಿ ಗ್ರಹಿಸಿದ್ದೇವೆಂದು ವರದಿ ಹೇಳಿದೆ.

ನಾಶವಾದ ಕರೆನ್ಸಿ ಬಾಧ್ಯತೆಯ ಲಾಭವನ್ನು ಆರ್‌ಬಿಐ ಹಾಗೂ ಸರಕಾರ ಲೆಕ್ಕ ಹಾಕಬೇಕಾಗಿದೆಯೆಂದು ವರದಿಯ ಲೇಖಕ ಹಾಗೂ ಎಸ್‌ಬಿಐಯಲ್ಲಿ ಆರ್ಥಿಕ ಸಲಹೆಗಾರ ಗುಂಪಿನ ಮುಖ್ಯಸ್ಥ ಸೌಮ್ಯಕಾಂತಿ ಘೋಷ್ ತಿಳಿಸಿದ್ದಾರೆ.

ರೂ. 2.5 ಲಕ್ಷ ಕೋಟಿಗಳಲ್ಲಿ ರೂ. 1 ಲಕ್ಷ ಕೋಟಿಯನ್ನು ಇತ್ತೀಚೆಗಿನ ಅಘೋಷಿತ ಹಣದ ಸ್ವಯಂ ಘೋಷಣೆ ಯೋಜನೆಯನ್ವಯ ಬಹಿರಂಗಪಡಿಸುವ ಸಾಧ್ಯತೆಯಿದೆ. ಇದರನ್ವಯ ಶೇ.50 ತೆರಿಗೆ ನೀಡಿ ಲೆಕ್ಕ ನೀಡದ ಹಣವನ್ನು ಘೋಷಿಸಬಹುದು. ಅಂದರೆ, ಸರಕಾರಕ್ಕೆ ಇದರಿಂದಾಗುವ ಅಲ್ಪಾವಧಿ ಲಾಭ ರೂ. 50 ಸಾವಿರ ಕೋಟಿಯಾಗಿರುತ್ತದೆಂದು ವರದಿ ಹೇಳಿದೆ.

ಇಂತಹ ತೆರಿಗೆ ಮುಂದಿನ ಬಜೆಟ್‌ನಲ್ಲಿ ತಕ್ಷಣವೆ ಕಲ್ಯಾಣ ಯೋಜನೆಗಳ ಅಗತ್ಯಗಳಲ್ಲಿ ಕಾಣಿಸಿಕೊಳ್ಳಬಹುದಾದುದರಿಂದ ನಾಶವಾದ ಕರೆನ್ಸಿಗಿಂತ ಇದು ಸರಕಾರಕ್ಕೆ ಲಾಭವಾಗಲಿದೆ. ಅಂದರೆ, ಆರ್‌ಬಿಐ ಬ್ಯಾಲೆನ್ಸ್ ಶೀಟ್‌ನಲ್ಲಿ ಠೇವಣಿಯಿರಿಸದ ರದ್ದಾದ ನೋಟುಗಳಷ್ಟು, ಬಿಡುಗಡೆಗೊಳಿಸಲಾದ ನೋಟುಗಳ ರೂಪದಲ್ಲಿ ಕಡಿಮೆಯಾಗುತ್ತದೆಂದು ಅದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News