×
Ad

ಏರ್‌ಸೆಲ್ ಗ್ರಾಹಕರಿಗೆ ಹೊಸ ಕೊಡುಗೆ

Update: 2016-12-05 23:55 IST

ಹೊಸದಿಲ್ಲಿ, ಡಿ.5: ಏರ್‌ಸೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ಕೊಡುಗೆಯೊಂದನ್ನು ಘೋಷಿಸಿದ್ದು , 148 ರೂ. ಪಾವತಿಸಿ ಮೂರು ತಿಂಗಳ ಅವಧಿಯಲ್ಲಿ ಸೀಮಿತ ಉಚಿತ ಅಂತರ್ಜಾಲ ಡೇಟಾ ಸೇರಿದಂತೆ ಅನಿಯಮಿತ ಕರೆ ಮಾಡುವ ಅವಕಾಶ ಕಲ್ಪಿಸಿದೆ.
148 ರೂ.ಮೊತ್ತದ ಕರೆನ್ಸಿ ರಿಚಾರ್ಜ್ ಮಾಡಿದರೆ ಏರ್‌ಸೆಲ್‌ನಿಂದ ಏರ್‌ಸೆಲ್‌ಗೆ (ಸ್ಥಳೀಯ ಮತ್ತು ಎಸ್‌ಟಿಡಿ ಕರೆ) ಮತ್ತು ಏರ್‌ಸೆಲ್‌ನಿಂದ ಇತರ ಟೆಲಿಸರ್ವಿಸ್‌ಗೆ ತಿಂಗಳಿಗೆ 250 ನಿಮಿಷದಂತೆ ಉಚಿತ ಕರೆ ಸೌಲಭ್ಯವನ್ನು ಮೂರು ತಿಂಗಳು ಪಡೆಯಬಹುದು. ಅಲ್ಲದೆ ಒಂದು ತಿಂಗಳು ಅನಿಯಮಿತ 2 ಜಿ ಡೇಟಾ ಬಳಸುವ ಅವಕಾಶವಿದೆ. ಈ ಅವಕಾಶ ದಿಲ್ಲಿಯ ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ.
ಎರಡು ಮತ್ತು ಮೂರನೇ ತಿಂಗಳು ಕನಿಷ್ಟ 50 ರೂ. ಕರೆನ್ಸಿ ರಿಚಾರ್ಜ್ ಮಾಡಿ ಕರೆ ಸೌಲಭ್ಯವನ್ನು ಮುಂದುವರಿಸಬಹುದು ಎಂದು ಏರ್‌ಸೆಲ್ ಸಂಸ್ಥೆಯ ಪ್ರಾದೇಶಿಕ ಪ್ರಬಂಧಕ (ಉತ್ತರ ವಿಭಾಗ) ಹರೀಶ್ ಶರ್ಮ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News