ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ

Update: 2016-12-06 18:05 GMT

ಚೆನ್ನೈ, ಡಿ.6: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರ ನಿಧನವನ್ನು ಅಪೋಲೊ ಆಸ್ಪತ್ರೆಯಲ್ಲಿ ಘೋಷಣೆ ಮಾಡಿದ ಎರಡು ಗಂಟೆಗಳಲ್ಲಿ, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಓ.ಪನ್ನೀರಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ರಾತ್ರಿ 1:20ಕ್ಕೆ ಅಧಿಕಾರ ಹಾಗೂ ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. 32 ಮಂದಿಯ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಿತು.

ಪನ್ನೀರಸೆಲ್ವಂ ಸಂಪುಟದ ಸಚಿವರೆಂದರೆ, ದಿಂಡಿಗಲ್ ಸಿ.ಶ್ರೀನಿವಾಸನ್, ಎಡಪ್ಪಾಡಿ ಕೆ.ಪಳನಿಸ್ವಾಮಿ, ಸೆಲ್ಲೂರು ಕೆ.ರಾಜು, ಪಿ.ತಂಗಮಣಿ, ಎಸ್.ಪಿ.ವೇಲುಮಣಿ, ಡಿ.ಜಯಕುಮಾರ್, ಸಿ.ವೆ.ಷಣ್ಮುಗಂ, ಕೆ.ಪಿ.ಅಂಬಳಗನ್, ವಿ.ಸರೋಜಾ, ಎಂ.ಸಿ.ಸಂಪತ್, ಕೆ.ಸಿ.ಕರುಪ್ಪಣ್ಣನ್, ಆರ್.ಕಾಮರಾಜ್, ಓ.ಎಸ್.ಮಣಿಯನ್, ಉದುಮಲೈ ಕೆ.ರಾಧಾಕೃಷ್ಣನ್, ಸಿ.ವಿಜಯ ಭಾಸ್ಕರ್, ಆರ್.ದೊರೈಕಣ್ಣು, ಕಡಂಬೂರು ರಾಜು, ಆರ್.ಬಿ.ಉದಯಕುಮಾರ್, ವೆಲ್ಲಮಂಡಿ ಎನ್.ನಟರಾಜನ್, ಕೆ.ಸಿ.ವೀರಮಣಿ, ಕೆ.ಪಣೀಂದ್ರರಾಜನ್, ಕೆ.ಟಿ.ರಾಜೇಂದ್ರ ಬಾಲಜಿ, ಪಿ.ಬೆಂಜಮಿನ್, ಎಂ.ಆರ್.ವಿಜಯಭಾಸ್ಕರ್, ನಿಲೋಫರ್ ಕಫೀಲ್, ಎಂ.ಮಣಿಕಂಠನ್, ವಿ.ಎಂ.ರಾಜಲಕ್ಷ್ಮಿ, ಜಿ.ಭಾಸ್ಕರನ್, ಸವ್ವೆರು ಎಸ್.ರಾಮಚಂದ್ರನ್, ಎಸ್.ವಲಾರಮತಿ, ಪಿ.ಬಾಲಕೃಷ್ಣ ರೆಡ್ಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News