×
Ad

ಪಿಎಸ್‌ಎಲ್‌ವಿ ರಾಕೆಟ್‌ನಿಂದ ದೂರ ಸಂವೇದಿ ಉಪಗ್ರಹ ಉಡಾವಣೆ

Update: 2016-12-07 11:22 IST

ಹೈದರಾಬಾದ್, ಡಿ.7:ಪಿಎಲ್‌ಎಲ್‌ವಿ ರಾಕೆಟ್‌ನಲ್ಲಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ನಡೆಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.

ಆಂಧ್ರದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬುಧವಾರ ಬೆಳಗ್ಗೆ 10:15ಕ್ಕೆ ಸಂಪನ್ಮೂಲ ದೃಷ್ಟಿ ದೂರ ಸಂವೇದಿ ಉಪಗ್ರಹ ರಿಸೋರ್ಟ್‌ಸ್ಯಾಟ್ 2-ಎ ಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು.

1,235ಕೆಜಿ ತೂಕದ ಉಪಗ್ರಹ 817 ಕಿಮೀ ವೇಗದಲ್ಲಿ ಕಕ್ಷೆಗೆ ಸೇರಿದ್ದು, ಇಸ್ರೋ ಸಂಸ್ಥೆ ಪಿಎಸ್‌ಎಲ್‌ವಿ ರಾಕೆಟ್‌ನಿಂದ ಕಕ್ಷೆಗೆ ಸೇರಿಸಿದ 36ನೆ ಉಪಗ್ರಹ ಇದಾಗಿದೆ. ನ.26ರಂದು ಉಪಗ್ರಹವನ್ನು ಉಡಾಯಿಸಲು ಯೋಜನೆ ರೂಪಿಸಲಾಗಿತ್ತು. ಉಪಗ್ರಹ ಉಡಾವಣೆಗೆ ಇಸ್ರೋ ಕಳೆದ ರಾತ್ರಿಯಿಂದ 36 ಗಂಟೆಗಳ ಕ್ಷಣಗಣನೆ ಆರಂಭಿಸಿತ್ತು.

ಕ್ರಮವಾಗಿ 2003 ಹಾಗೂ 201ರಲ್ಲಿ ರಿಸೋರ್ಟ್‌ಸ್ಯಾಟ್-1 ಹಾಗೂ ರಿಸೋರ್ಟ್‌ಸ್ಯಾಟ್-2 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News