×
Ad

ಜಯಾ ಅಂತಿಮ ದರ್ಶನಕ್ಕೆ ಪ್ರಯಾಣಿಸುತ್ತಿರುವ ರಾಷ್ಟ್ರಪತಿಯ ಚಿತ್ರ

Update: 2016-12-07 13:06 IST

ಹೊಸದಿಲ್ಲಿ, ಡಿ.7: ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ಸಲುವಾಗಿ ಭಾರತೀಯ ವಾಯು ಸೇನೆಯ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯ ಫೋಟೋವೊಂದು ಅಂರ್ತಜಾಲದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ರಾಷ್ಟ್ರಪತಿ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಅರ್ಧ ಹಾದಿ ಕ್ರಮಿಸಿದ ನಂತರ ಮತ್ತೆ ದೆಹಲಿಗೆ ಮರಳಬೇಕಾಗಿ ಬಂದಿತ್ತು. ನಂತರ ಅದು  ಮತ್ತೆ ಚೆನ್ನೈನತ್ತ ಪ್ರಯಾಣ ಬೆಳೆಸಿತ್ತು.

ರಾಷ್ಟ್ರಪತಿ ಭವನ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದರಲ್ಲಿ ಮುಖರ್ಜಿ  ವಾಯುಸೇನೆ ವಿಮಾನದ ಒಂದು ಬದಿಯಲ್ಲಿ ಬೆಂಚ್-ಸೀಟಿನಲ್ಲಿ ಕುಳಿತಿರುವುದು ಕಾಣಬಹುದಾಗಿದೆ.

ಮರೀನಾ ಬೀಚಿಗೆ ತೆರಳುವ ಸಲುವಾಗಿ ರಾಷ್ಟ್ರಪತಿಗಳು  ಸರಕು ಸಾಗಾಟ ವಿಮಾನವಾಗಿರುವ ಐಎಫ್ ಮಿ-17 ಇದರಲ್ಲಿ ಪ್ರಯಾಣಿಸಬೇಕಾಗಿ ಬಂದಿತ್ತು.

ಇಷ್ಟೊಂದು ಕಷ್ಟ ಪಟ್ಟು ಈ ಇಳಿ ವಯಸ್ಸಿನಲ್ಲಿ ರಾಷ್ಟ್ರಪತಿಗಳು ಪ್ರಯಾಣಿಸಬೇಕಿತ್ತೇ ಎಂದು ಕೆಲವರು ಪ್ರಶ್ನಿಸಿದರೆ ಇನ್ನು ಕೆಲವರು ಅವರನ್ನು ಹೊಗಳಿ ರಾಷ್ಟ್ರಪತಿಗಳಿಗೆ ಜಯಲಲಿತಾ ಮೇಲಿರುವ ಗೌರವವನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಜಯಲಲಿತಾ ಅವರನ್ನು ಒಬ್ಬ ಹೋರಾಟಗಾರ್ತಿ ಎಂದು ಬಣ್ಣಿಸಿರುವ ಪ್ರಣಬ್ ಮುಖರ್ಜಿ  ಆಕೆಗೆ ವಾಸ್ತವತೆ ಮತ್ತು ಸಿದ್ಧಾಂತಗಳ ಬಗ್ಗೆ ಅಪಾರ ಜ್ಞಾನವಿತ್ತು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News