×
Ad

ಆಸ್ಪತ್ರೆ ಸೇರಿದ ದಿಲೀಪ್ ಕುಮಾರ್ ಏನು ಹೇಳಿದ್ದಾರೆ ನೋಡಿ

Update: 2016-12-07 13:25 IST

ಹೊಸದಿಲ್ಲಿ, ಡಿ.7:  ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ 93 ವರ್ಷದ ದಿಲೀಪ್ ಕುಮಾರ್ ತಾವು ಆರೋಗ್ಯದಿಂದಿದ್ದೇನೆ ಎಂದು ಹೇಳಿ ಟ್ವಿಟ್ಟರಿನಲ್ಲಿ ತಮ್ಮ ಹಲವು ಫೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳ ಭಯವನ್ನು ದೂರ ಮಾಡಿದ್ದಾರೆ.

ಜ್ವರ ಹಾಗೂ ಬಲಗಾಲಿನಲ್ಲಿ ಊತ ಕಂಡು ಬಂದ ಹಿನ್ನೆಲೆಯಲ್ಲಿ ದಿಲೀಪ್ ಅವರನ್ನು ಅವರ ಪತ್ನಿ ಹಾಗೂ ಹಿರಿಯ ನಟಿ ಸಾಯಿರಾ ಬಾನು ಮಂಗಳವಾರ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು.

ತಮ್ಮ ಪತ್ನಿ ಜತೆ ಸೇರಿ ಹಲವಾರು ಟ್ವೀಟುಗಳನ್ನು ಮಾಡಿ ಹಲವಾರು ಫೋಟೋಗಳನ್ನೂ ಪೋಸ್ಟ್ ಮಾಡಿರುವ ದಿಲೀಪ್ ತಮ್ಮ ಆರೋಗ್ಯ ಈಗ ಬಹಳಷ್ಟು ಸುಧಾರಿಸಿದೆ ಹಾಗೂ ತಾವು  ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸಿದ್ದಾಗೆ ಹೇಳಿದರಲ್ಲದೆ ತಮ್ಮ ವೈದ್ಯರಾದ ಡಾ ಎಸ್.ಗೋಖಲೆ, ಡಾ. ನಿತಿನ್ ಗೋಖಲೆ, ಡಾ. ಆರ್ ಶರ್ಮ ಹಾಗೂ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ತಮ್ಮ ಧನ್ಯವಾದ ಹೇಳಿದ್ದಾರೆ.
ಡಿಸೆಂಬರ್ 11 ರಂದು ತಮ್ಮ 94ನೇ ಹುಟ್ಟುಹಬ್ಬವನ್ನು ಆಚರಿಸಲಿರುವ ನಟ ತಾವು ತಮ್ಮ ಅಭಿಮಾನಿಗಳ ಆಶೀರ್ವಾದದಿಂದ ಆರೋಗ್ಯದಿಂದಿದ್ದೇನೆ ಎಂದು ಹೇಳಿದರು.

``ಸಾಮಾನ್ಯ ಚೆಕ್-ಅಪ್ ಗೆಂದು ಅವರನ್ನು ಆಸ್ಪತ್ರೆಗೆ ಮಂಗಳವಾರ ಕರೆದುಕೊಂಡು ಬರುವುದಿತ್ತು. ತರುವಾಯ ಅವರ ಕಾಲಿನಲ್ಲಿ ಊತ ಹಾಗೂ ಅವರಿಗೆ ಶೀತ, ಕೆಮ್ಮು ಇದ್ದುದರಿಂದ ನಾನು ಗಾಬರಿಯಾಗಿ ಆಸ್ಪತ್ರೆಗೆ ದಾಖಲಿಸಿದೆ. ಈಗ ಅವರು ಚೆನ್ನಾಗಿದ್ದಾರೆ,'' ಎಂದು ಸಾಯಿರಾ ಬಾನು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News