ರಈಸ್ ಟ್ರೇಲರ್ ಬಿಡುಗಡೆ
ಸೂಪರ್ ಸ್ಟಾರ್ ಶಾರುಖ್ ಖಾನ್ ರ ಹೊಸ ಚಿತ್ರ ರಈಸ್ ನ ಟ್ರೇಲರ್ ಬುಧವಾರ ಬಿಡುಗಡೆ ಆಗಿದೆ. ದೇಶಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಈ ಟ್ರೇಲರ್ ಜೊತೆ ಶಾರುಖ್ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಗುಜರಾತ್ ನ ಗ್ಯಾಂಗ್ ಸ್ಟರ್ , ಸಾರಾಯಿ ದೊರೆ ರಈಸ್ ಹಾಗು ಆತನನ್ನು ಮಟ್ಟ ಹಾಕಲು ಪಣ ತೊಟ್ಟ ಪೊಲೀಸ್ ಅಧಿಕಾರಿ ( ನವಾಝುದ್ದೀನ್ ಸಿದ್ದೀಕಿ) ಯ ನಡುವಿನ ಫೈಟ್ ಈ ಚಿತ್ರದ ಹೈಲೈಟ್ . ಪಾಕ್ ನಟಿ ಮಹಿರಾ ಖಾನ್ ಇದರಲ್ಲಿ ಶಾರುಖ್ ಪತ್ನಿಯಾಗಿ ನಟಿಸಿದ್ದಾರೆ. ಮಸಾಲೆಗೆ ಹಿಟ್ ಹಾಡು ಲೈಲಾ ಓ ಲೈಲಾದ ಹೊಸ ರೂಪದಲ್ಲಿ ಸನ್ನಿ ಲಿಯೋನ್ ಇದ್ದಾರೆ.
ಗಮನ ಸೆಳೆಯುವ ಸಂಭಾಷಣೆ " ಬನಿಯಾಕ ದಿಮಾಗ್ ಎಂಡ್ ಮಿಯಾಂ ಭಾಯ್ ಕಿ ಡೇರಿಂಗ್ ( ಬನಿಯಾನ ಬುದ್ಧಿ ಹಾಗು ಮುಸ್ಲಿಂ ಡಾನ್ ನ ಧೈರ್ಯ)" ಮೂಲಕ ಚಿತ್ರದ ಟೀಸರ್ ಈಗಾಗಲೇ ಹಿಟ್ ಆಗಿದೆ.
ಈ ವರ್ಷ ಜುಲೈ ನಲ್ಲಿ ಬಿಡುಗಡೆಯಾಗಬೇಕಿದ್ದ ರಈಸ್ ಸಲ್ಮಾನ್ ರ ಸುಲ್ತಾನ್ ಜೊತೆ ಠಕ್ಕರ್ ಆಗಬೇಕಿತ್ತು. ಆದರೆ ಅದನ್ನು ಜನವರಿ 26 ,2017 ಕ್ಕೆ ಮುಂದೂಡಲಾಯಿತು. ಅದೇ ದಿನ ಹೃತಿಕ್ ಅಭಿನಯದ ಥ್ರಿಲ್ಲರ್ ಕಾಬಿಲ್ ಬಿಡುಗಡೆಗೆ ಫಿಕ್ಸ್ ಆಗಿತ್ತು. ಕಾಬಿಲ್ ಬಿಡುಗಡೆಯನ್ನು ಒಂದು ದಿನ ಹಿಂದೂಡಿದಾಗ ರಈಸ್ ಬಿಡುಗಡೆ ಕೂಡ ಜನವರಿ ೨೫ ಕ್ಕೇ ಫಿಕ್ಸ್ ಆಗಿದೆ. ಇದು ರೋಷನ್ ಹಾಗು ಖಾನ್ ನಡುವೆ ಜಟಾಪಟಿಗೂ ಕಾರಣವಾಗಿದೆ.
ಟ್ರೇಲರ್ ಇಲ್ಲಿದೆ ನೋಡಿ :