×
Ad

ಕ್ಯಾಶ್ ಲೆಸ್ ಆಗಿ ಎಂದು ಹೇಳುತ್ತಿರುವ ನಮ್ಮ ದೇಶದಲ್ಲಿ ಅತ್ಯಗತ್ಯವಾದ ಇಂಟರ್‌ನೆಟ್ ಪರಿಸ್ಥಿತಿ ಹೇಗಿದೆ ನೋಡಿ

Update: 2016-12-08 14:26 IST

ಹೊಸದಿಲ್ಲಿ, ಡಿ.8: ನೋಟು ಅಮಾನ್ಯಗೊಳಿಸಿದ ಆರಂಭದ ದಿನಗಳಲ್ಲಿ ಕಾಳಧನ ಹಾಗೂ ಭ್ರಷ್ಟಾಚಾರ ನಿಯಂತ್ರಣ ಎಂದೆಲ್ಲ ಹೇಳುತ್ತಿದ್ದ ಕೇಂದ್ರ ಸರಕಾರ ಇದೀಗ ಕ್ಯಾಶ್ ಲೆಸ್ ಇಕಾನಮಿಯ ಮಂತ್ರ ಜಪಿಸುತ್ತಿದೆ. ತಮ್ಮ ಇತ್ತೀಚಿಗಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೂಡ ಪ್ರಧಾನಿ ಇದನ್ನೇ ಹೇಳಿದ್ದರಲ್ಲದೆ ಜನರು ಡಿಜಿಟಲ್ ವ್ಯವಹಾರಗಳನ್ನು ಅಭ್ಯಸಿಸಬೇಕೆಂದು ಕರೆ ನೀಡಿದ್ದರು. ಇಂಟರ್ ನೆಟ್ ಬ್ಯಾಂಕಿಂಗ್ ವಿಧಾನವನ್ನೂ ಕಲಿಯಬೇಕೆಂಬ ಸಲಹೆಯನ್ನು ಅವರು ನೀಡಿದ್ದರು. ಕ್ಯಾಶ್ ಲೆಸ್ ಆರ್ಥಿಕತೆಸುರಕ್ಷಿತ ಎಂದೂ ಅವರು ಹೇಳಿಕೊಂಡಿದ್ದರು.

ಆದರೆ ಭಾರತ ಕ್ಯಾಶ್ ಲೆಸ್ ಆರ್ಥಿಕತೆಗೆ ಬದಲಾಗುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಭಾರತದಲ್ಲಿ ತಾಂಡವವಾಡುತ್ತಿರುವ ಅನಕ್ಷರತೆ, ಜನರಿಗೆ ತಂತ್ರಜ್ಞಾನದ ಬಗ್ಗೆ ಮಾಹಿತಿಯ ಕೊರತೆ, ಇಂಟರ್‌ನೆಟ್ ಸೌಲಭ್ಯವಿಲ್ಲದೇ ಇರುವುದು-ಇಂತಹ ಹಲವು ಸಮಸ್ಯೆಗಳು ಕ್ಯಾಶ್ ಲೆಸ್ ಇಕಾನಮಿಗೆ ಅಡೆತಡೆಗಳಾಗಿವೆ. ಮೇಲಾಗಿ ಹಲವಾರು ಬಾರಿ ಸರಕಾರವೇ ಗಲಭೆ ಹಾಗೂ ಹಿಂಸೆಯ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ನಿದರ್ಶನಗಳಿವೆ.

ದೇಶವೊಂದು ಕ್ಯಾಶ್ ಲೆಸ್ ಇಕಾನಮಿ ಆಗಬೇಕಾದಲ್ಲಿ ನಿರಂತರ ಇಂಟರ್‌ನೆಟ್ ಸಂಪರ್ಕ ಅತ್ಯಗತ್ಯವಾಗಿದ್ದು ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಲ್ಲಿ ಕ್ಯಾಶ್‌ಲೆಸ್ ವ್ಯವಹಾರಗಳಿಗೆ ದೊಡ್ಡ ತೊಡಕಾಗಲಿದೆ.

2014ರಿಂದ ಸರಕಾರ 250ಕ್ಕೂ ಹೆಚ್ಚು ದಿನಗಳ ಕಾಲ ದೇಶದ ವಿವಿಧೆಡೆಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಿದೆ. ಈ ವರ್ಷದಲ್ಲೇ 200 ದಿನಗಳ ಕಾಲಇಂಟರ್ ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದರೆ ಕಳೆದ ವರ್ಷ 30 ದಿನಗಳ ಕಾಲ ಈ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಈ ವರ್ಷಶೇ 60 ರಷ್ಟು ಇಂಟರ್ ನೆಟ್ ಸಂಪರ್ಕ ಕಡಿತ ಜಮ್ಮು ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವನಿ ಹತ್ಯೆಯ ನಂತರದ ಹಿಂಸೆಯ ನೆಪವೊಡ್ಡಿ ಮಾಡಲಾಗಿತ್ತು. ಸತತ 133 ದಿನಗಳ ಕಾಲ ಅಲ್ಲಿ ಮೊಬೈಲ್ ಇಂಟರ್‌ನೆಟ್ ಸಂಪರ್ಕ ಇರಲಿಲ್ಲ.

ಈ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಹರ್ಯಾಣದಲ್ಲಿನ ಜಾಟ್ ಮೀಸಲಾತಿ ಚಳುವಳಿ ಸಂದರ್ಭ 10 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿತ್ತು.

ಪ್ರಧಾನಿಯ ತವರು ರಾಜ್ಯವಾದ ಗುಜರಾತ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭಗಳಲ್ಲಿಯೂ ನಕಲು ಮಾಡುವುದನ್ನು ತಡೆಯಲು ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದ ಪಟಿದಾರ್ ಚಳವಳಿ ಸಂದರ್ಭವೂ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News