ದಾಖಲೆಗಳನ್ನು ಚಿಂದಿ ಉಡಾಯಿಸಿದ ರಈಸ್

Update: 2016-12-08 14:10 GMT

ಮುಂಬೈ,ಡಿ. 8 : ಶಾರುಖ್ ಖಾನ್ ರ ಬಹುನಿರೀಕ್ಷಿತ ಚಿತ್ರ ರಈಸ್ ಬಿಡುಗಡೆಗೆ ಮೊದಲೇ ದಾಖಲೆಗಳನ್ನು ಚಿಂದಿ ಉಡಾಯಿಸಿದೆ. ಜೊತೆಗೆ ಭಾರೀ ಚರ್ಚೆಗೂ ಕಾರಣವಾಗಿದೆ.

ಡಿ. 7 ರಂದು ಬಿಡುಗಡೆಯಾದ ಚಿತ್ರದ ಟ್ರೇಲರ್ ಕೇವಲ 20 ಗಂಟೆಗಳೊಳಗೆ  10.5 ಮಿಲಿಯನ್ ( ಒಂದು ಕೋಟಿಗೂ ಹೆಚ್ಚು) ಮಂದಿ ವೀಕ್ಷಿಸುವ ಮೂಲಕ ಈವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಯುಟೂಬ್ ನಲ್ಲಿ  ಟ್ರೇಲರ್ ವೀಕ್ಷಿಸಿದವರ ಸಂಖ್ಯೆ 12,706,919 (ಒಂದು ಕೋಟಿ ಇಪ್ಪತ್ತೇಳು ಲಕ್ಷಕ್ಕೂ ಹೆಚ್ಚು) . 

ಸಾಮಾಜಿಕ ಜಾಲತಾಣಗಳಲ್ಲಿ #RaeesTrailer ಟ್ರೆಂಡಿಂಗ್ ಆಗಿದೆ.

ಬಾಲಿವುಡ್ ದಿಗ್ಗಜರು ಟ್ರೇಲರ್ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. 

ಸಲ್ಮಾನ್ ಖಾನ್ ಅವರ ಸುಲ್ತಾನ್ 42 ಗಂಟೆಗಳಲ್ಲಿ , ಆಮಿರ್ ಖಾನ್ ಅವರ ದಂಗಲ್  8 ಗಂಟೆ  48 ನಿಮಿಷಗಳಲ್ಲಿ , ಅಜಯ್ ದೇವ್ಗನ್ ರ  ಶಿವಾಯ್ 23 ಗಂಟೆಗಳಲ್ಲಿ , ಎಂ ಎಸ್ ಧೋನಿ 12 ಗಂಟೆಗಳಲ್ಲಿ ಹತ್ತು ಲಕ್ಷ ಲೈಕ್ ಗಳಿಸಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News