ಫೈಝಲ್ ಹತ್ಯೆ: ಸಂಚು ಹೆಣೆದವರಿಗೂ ಮುಖ್ಯ ಆರೋಪಿಗಳಿಗೂ ಸಂಬಂಧವಿರುವುದು ಬಹಿರಂಗ
ತಿರೂರಂಞಾಡಿ, ಡಿ. 9: ಕೊಡಿಂಞಿ ಪುಲ್ಲಾಣಿ ಫೈಝಲ್ ಕೊಲೆಕೃತ್ಯದ ಮುಖ್ಯ ಆರೋಪಿಗಳಿಗೂ ಸಂಚು ಹೆಣದ ತಂಡಕ್ಕೂ ನೇರ ಸಂಬಧವಿದೆ ಎಂಬುದು ಬಹಿರಂಗೊಂಡಿದೆ ಎಂದು ವರದಿಯಾಗಿದೆ. ಫೈಝಲ್ ಮತಾಂತರಗೊಂಡು ಊರಿಗೆ ಬಂದ ನಂತರ ಮೇಲಪ್ಪುರದ ವಿದ್ಯಾನಿಕೇತನ್ ಸ್ಕೂಲ್‌ನಲ್ಲಿ ಸಂಚು ನಡೆಸಿದ ತಂಡದ ಪುಳಿಕ್ಕಲ್ ಹರಿದಾಸನ್(30). ಕಳತ್ತಿಲ್ ಪ್ರದೀಪ್ ಯಾನೆ ಕುಟ್ಟನ್(32)ರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಿಸಿದಾಗ ಮುಖ್ಯಆರೋಪಿಗಳಿಗೂ ಸಂಚು ಹೆಣೆದವರಿಗೂ ಸಂಬಂಧ ಇರುವುದು ತಿಳಿದು ಬಂದಿದೆ.
ಸಂಚು ಹೆಣೆದ ತಂಡದ ಇಬ್ಬರು ತಿರೂರಿನ ಆರೆಸ್ಸೆಸ್ ನಾಯಕ ಮಠತ್ತಿಲ್ ನಾರಾಯಣನ್‌ನನ್ನು ಸಂಪರ್ಕಿಸಿದ್ದರು. ಕೃತ್ಯ ನಡೆಸಲು ನಾರಾಯಣನ್ ನಾಲ್ವರ ತಂಡವನ್ನು ಗೊತ್ತುಪಡಿಸಿದ್ದಾನೆ. ಇದರ ನಂತರ ಮುಖ್ಯ ಆರೋಪಿಗಳು ಹಲವು ಬಾರಿ ಕೊಡಿಂಞಿಗೆ ಹೋಗಿದ್ದಾರೆ. ಫೈಝಲ್ ವಾಸಿಸುತ್ತಿದ್ದ ಸ್ಥಳ ಪ್ರದೇಶಗಳನ್ನು ಪರೀಕ್ಷಿಸಿದ್ದಾರೆ ಎಂದು ಪೊಲೀಸರು ಪ್ರಶ್ನಿಸಿದಾಗ ಆರೋಪಿಗಳು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ನಾಲ್ವರ ತಂಡದ ಮುಖ್ಯ ಆರೋಪಿ ಮತ್ತು ತಿರೂರಿನ ನಾರಾಯಣನ್‌ನನ್ನು ಸಂಚಿನ ಭಾಗಿಯಾದ ಪರಂಪ್ಪನಂಗಾಡಿಯ ಒಬ್ಬ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬೀಳದೆ ತಪ್ಪಿಸಿಕೊಂಡಿದ್ದಾರೆ. ಭೂಗತರಾಗಿರುವ ಇವರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.ನಾರಾಯಣನ್ ನನ್ನು ಹುಡುಕಿಕೊಂಡು ಹಲವು ಬಾರಿ ತೃಕ್ಕಂಡಿಯೂರ್‌ಗೆ ಹೋದರೂ ಸೆರೆಹಿಡಿಯಲು ಸಾಧ್ಯವಾಗಿಲ್ಲ. ಆತ ರಾಜ್ಯವನ್ನು ತೊರೆದಿರಬೇಕೆಂದು ವರದಿಗಳಿವೆ. ಕಳೆದ ದಿವಸತಿರೂರ್ ಮಂಗಲಂ ಪುಲ್ಲೂಣಿಯ ಪ್ರಜೀಷ್ ಯಾನೆ ಬಾಬು, ಸುದೀಶ್ ಯಾನೆ ಕುಟ್ಟಪ್ಪು, ವಳ್ಳಿಕುನ್ನ್‌ನ ಅಪ್ಪ ಯಾನೆ ಕುಟ್ಟೂಸ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಪ್ರಶ್ನಿಸಿದ ವೇಳೆ ಸಿಕ್ಕಿದ ಮಾಹಿತಿ ಪ್ರಕಾರ ಹರಿದಾಸ್ ಮತ್ತು ಪ್ರದೀಪ್‌ರನ್ನು ಬಂಧಿಸಿ ಕೋರ್ಟಿನಲ್ಲಿ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ವರದಿತಿಳಿಸಿದೆ.