ಆಸ್ಪತ್ರೆ ಸೇರಿದ ದಿಲೀಪ್ ಕುಮಾರ್

Update: 2016-12-09 14:06 GMT

ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ 93 ವರ್ಷದ ದಿಲೀಪ್ ಕುಮಾರ್ ತಾನು ಆರೋಗ್ಯದಿಂದಿದ್ದೇನೆ ಎಂದು ಹೇಳಿ ಟ್ವಿಟರಿನಲ್ಲಿ ತಮ್ಮ ಹಲವು ಫೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳ ಭಯವನ್ನು ದೂರ ಮಾಡಿದ್ದಾರೆ.

ಜ್ವರ ಹಾಗೂ ಬಲಗಾಲಿನಲ್ಲಿ ಊತ ಕಂಡು ಬಂದ ಹಿನ್ನೆಲೆಯಲ್ಲಿ ದಿಲೀಪ್ ಅವರನ್ನು ಅವರ ಪತ್ನಿ ಹಾಗೂ ಹಿರಿಯ ನಟಿ ಸಾಯಿರಾ ಬಾನು ಮಂಗಳವಾರ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು.

ತನ್ನ ಪತ್ನಿ ಜತೆ ಸೇರಿ ಹಲವಾರು ಟ್ವೀಟ್‌ಗಳನ್ನು ಮಾಡಿ ಹಲವಾರು ಫೋಟೊೀಗಳನ್ನೂ ಪೋಸ್ಟ್ ಮಾಡಿರುವ ದಿಲೀಪ್ ತಮ್ಮ ಆರೋಗ್ಯ ಈಗ ಬಹಳಷ್ಟು ಸುಧಾರಿಸಿದೆ ಹಾಗೂ ತಾವುನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸಿದ್ದಾಗಿ ಹೇಳಿದರಲ್ಲದೆ ತಮ್ಮ ವೈದ್ಯರಾದ ಡಾ. ಎಸ್ ಗೋಖಲೆ, ಡಾ. ನಿತಿನ್ ಗೋಖಲೆ, ಡಾ. ಆರ್ ಶರ್ಮಾ ಹಾಗೂ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಡಿಸೆಂಬರ್ 11 ರಂದು ತಮ್ಮ 94ನೆ ಹುಟ್ಟುಹಬ್ಬವನ್ನು ಆಚರಿಸಲಿರುವ ನಟ ತಾವು ತಮ್ಮ ಅಭಿಮಾನಿಗಳ ಆಶೀರ್ವಾದದಿಂದ ಆರೋಗ್ಯದಿಂದಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News