×
Ad

ಇಂಜಿನ್‌ನಲ್ಲಿ ತೊಂದರೆ ಪಾಕ್ ವಿಮಾನ ಪತನಕ್ಕೆ ಕಾರಣ : ಆರಂಭಿಕ ತನಿಖಾ ವರದಿ

Update: 2016-12-09 20:49 IST

ಇಸ್ಲಾಮಾಬಾದ್, ಡಿ. 9: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ಪಿಕೆ-661 ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗ ಅದರ ಒಂದು ಇಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವುದೇ ವಿಮಾನ ಪತನಗೊಳ್ಳಲು ಕಾರಣ ಎಂದು ಆರಂಭಿಕ ತನಿಖೆಯೊಂದು ತಿಳಿಸಿದೆ.

ವಿಮಾನ 13,375 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ವಿಮಾನದ ಎಡ ಇಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡು ಸ್ಫೋಟಗೊಂಡಿತು ಹಾಗೂ ಸ್ಫೋಟದಿಂದ ಅದರ ಒಂದು ರೆಕ್ಕೆಗೆ ಹಾನಿಯಾಯಿತು ಎಂದು ನಾಗರಿಕ ವಾಯುಯಾನ ಪ್ರಾಧಿಕಾರ ನಡೆಸುತ್ತಿರುವ ಆರಂಭಿಕ ತನಿಖೆಯನ್ನು ಉಲ್ಲೇಖಿಸಿ ‘ಡಾನ್’ ವರದಿ ಮಾಡಿದೆ.

ಬುಧವಾರ ಸಂಭವಿಸಿದ ಅಪಘಾತದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 47 ಮಂದಿ ಸಾವಿಗೀಡಾಗಿದ್ದಾರೆ.

ಆಕಾಶದಲ್ಲಿ ಹಾರುತ್ತಿದ್ದ ವಿಮಾನ ಒಮ್ಮೆಲೆ ಸಮತೋಲನರಹಿತ ಸ್ಥಿತಿಯಲ್ಲಿ ಕುಸಿಯಿತು ಹಾಗೂ ಅದಕ್ಕೆ ಬಳಿಕ ಎತ್ತರವನ್ನು ಗಳಿಸಲು ಸಾಧ್ಯವಾಗಲಿಲ್ಲ. ಬಳಿಕ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು.

 ಕೆಲವು ಮಿಲಿ ಸೆಕೆಂಡ್‌ಗಳ ಕಾಲ ವಿಮಾನ ಸ್ಥಿರವಾಗಿತ್ತು ಹಾಗೂ ಪೈಲಟ್ ಸ್ವಲ್ಪ ನಿಯಂತ್ರಣವನ್ನು ಪಡೆದನು. ಕೆಲವು ಸೆಕೆಂಡ್‌ಗಳ ಕಾಲ ವಿಮಾನ ತೇಲುತ್ತಾ ಸಾಗಿತು. ಆದರೆ, ಮತ್ತೆ ಕುಸಿಯಲು ಆರಂಭಿಸಿತು ಹಾಗೂ ಕೆಲವೇ ಸೆಕೆಂಡ್‌ಗಳಲ್ಲಿ ಅದು ರಾಡಾರ್ ಪರದೆಯಿಂದ ಮಾಯವಾಯಿತು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News