×
Ad

ಅಮೆರಿಕದ ಶ್ರೇಷ್ಠ ಗಗನಯಾನಿ ಜಾನ್ ಗ್ಲೆನ್ ನಿಧನ

Update: 2016-12-09 21:23 IST

ವಾಶಿಂಗ್ಟನ್, ಡಿ. 9: ಇಪ್ಪತ್ತನೆ ಶತಮಾನದ ಶ್ರೇಷ್ಠ ಬಾಹ್ಯಾಕಾಶ ಯಾನಿಗಳ ಪೈಕಿ ಒಬ್ಬರಾಗಿದ್ದ ಜಾನ್ ಗ್ಲೆನ್ ಗುರುವಾರ ಓಹಿಯೊ ಸರಕಾರಿ ವಿಶ್ವವಿದ್ಯಾನಿಲಯದ ಜೇಮ್ಸ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಅವರು ಬಾಹ್ಯಾಕಾಶದಲ್ಲಿ ಭೂಮಿಗೆ ಸುತ್ತುಬಂದ ಮೊದಲ ಅಮೆರಿಕನ್ ಹಾಗೂ ಬಳಿಕ ಜಗತ್ತಿನ ಅತ್ಯಂತ ಹಿರಿಯ ಗಗನಯಾನಿ ಆಗಿದ್ದರು. ಜೊತೆಗೆ ಅಮೆರಿಕದ ಸೆನೆಟರ್ ಆಗಿಯೂ ಸುದೀರ್ಘ ಅವಧಿ ಸೇವೆ ಸಲ್ಲಿಸಿದರು.

ಅವರು 1962 ಫೆಬ್ರವರಿ 20ರಂದು ‘ಫ್ರೆಂಡ್‌ಶಿಪ್ 7’ ಕ್ಯಾಪ್ಸೂಲ್‌ನಲ್ಲಿ ಪ್ರಪಂಚಕ್ಕೆ ಮೂರು ಸುತ್ತು ಬಂದರು.

ಅವರ ನಿಧನಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News