ಈಜಿಪ್ಟ್: ಚರ್ಚ್ ಒಳಗೆ ಬಾಂಬ್ ಸ್ಫೋಟ; 25 ಸಾವು
Update: 2016-12-11 21:46 IST
ಕೈರೋ, ಡಿ. 11: ಈಜಿಪ್ಟ್ ರಾಜಧಾನಿ ಕೈರೋದ ಕಾಪ್ಟಿಕ್ ಕತೀಡ್ರಲ್‌ನ ಒಳಗೆ ನಡೆದ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ ಎಂದು ಈಜಿಪ್ಟ್‌ನ ಸರಕಾರಿ ಟೆಲಿವಿಶನ್ ಹೇಳಿದೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಕಾಪ್ಟಿಕ್ ಪೋಪ್‌ರ ಆಸನದ ಬಳಿ ಸ್ಫೋಟ ಸಂಭವಿಸಿದೆ.
ಸ್ಫೋಟಕ್ಕೆ ತಕ್ಷಣಕ್ಕೆ ಯಾರೂ ಜವಾಬ್ದಾರಿ ಹೊತ್ತುಕೊಂಡಿಲ್ಲ.