ಹೀಗೂ ಉಂಟೆ ? ತ್ಯಾಜ್ಯ ಕೊರತೆಯಿಂದಾಗಿ ಕಸ ಆಮದು ಮಾಡಿಕೊಳ್ಳುತ್ತಿದೆ ಈ ದೇಶ !

Update: 2016-12-11 17:32 GMT

ಲಂಡನ್: ಭಾರತದಲ್ಲಿ ಕಸವಿಲೇವಾರಿ ಭಾರೀ ದೊಡ್ಡ ಸಮಸ್ಯೆಯಾದರೆ, ಯುರೋಪ್ ರಾಷ್ಟ್ರವಾದ ಸ್ವೀಡನ್ ತೀವ್ರ ಕಸದ ಅಭಾವವನ್ನೆದುರಿಸುತ್ತಿದೆ. ಹೌದು. ತ್ಯಾಜ್ಯಗಳಿಂದ ವಿದ್ಯುತ್ತನ್ನು ಉತ್ಪಾದಿಸುವ ಸ್ವೀಡನ್‌ನ ತನ್ನ ಅತ್ಯಾಧುನಿಕವಾದ ಮರು ಬಳಕೆಯ ಇಂಧನ ಉತ್ಪಾದನಾ ಸ್ಥಾವರಗಳನ್ನು ನಡೆಸಲು ಇತರ ದೇಶಗಳಿಂದ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ.

ತನಗೆ ಭೇಕಾದ ವಿದ್ಯುತ್‌ನ ಅರ್ಧದಷ್ಟನ್ನು ಮರುಬಳಕೆಯೋಗ್ಯ ತ್ಯಾಜ್ಯಗಳಿಂದಲೇ ಉತ್ಪಾದಿಸುವ ಸ್ವೀಡನ್ 1991ರಲ್ಲಿ ಪಳೆಯುಳಿಕೆ ಇಂಧನಗಳ ಮೇಲೆ ಭಾರೀ ತೆರಿಗೆಯನ್ನು ವಿಧಿಸಿತ್ತು. ಸ್ವೀಡನ್‌ನ ಮರುಬಳಕೆ ಇಂಧನ ಉತ್ಪಾದನೆ ಎಷ್ಟು ಅತ್ಯಾಧುನಿಕವಾಗಿದೆಯೆಂದರೆ, ಕಳೆದ ವರ್ಷ ಕೇವಲ ಶೇ.1ರಷ್ಟು ಗೃಹತ್ಯಾಜ್ಯಗಳನ್ನಷ್ಟೇ ಭೂಮಿಯಲ್ಲಿ ಹುಗಿಯಲಾಗಿತ್ತು. ಉಳಿದ ಎಲ್ಲಾ ತ್ಯಾಜ್ಯಗಳು ಇಂಧನ ಉತ್ಪಾದನೆಗೆ ಬಳಕೆಯಾಗಿತ್ತು.

‘‘ಸ್ವೀಡನ್ ಜನತೆ ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ತೀವ್ರ ಕಾಳಜಿ ಯನ್ನು ಹೊಂದಿದ್ದಾರೆಂದು ಸ್ವೀಡನ್‌ನ ತ್ಯಾಜ್ಯ ಮರುಬಳಕೆದಾರರ ಸಂಘ ದ ನಿರ್ದೇಶಕಿ ಆ್ಯನಾ- ಕ್ಯಾರಿನ್ ಗ್ರಿಪ್‌ವಾಲ್ ಹೇಳುತ್ತಾರೆ. ತ್ಯಾಜ್ಯಗಳನ್ನು ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಸಂಘವು ಬಹಳ ಸಮಯದಿಂದ ಶ್ರಮಿಸಿದೆ ಯೆಂದು ಅವರು ಹೇಳುತ್ತಾರೆ.

ಸ್ವೀಡನ್ ಸಮಗ್ರವಾದ ರಾಷ್ಟ್ರೀಯ ತ್ಯಾಜ್ಯ ಮರುಬಳಕೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಖಾಸಗಿ ಕಂಪೆನಿಗಳು ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಲುವ ಹಾಗೂ ದಹಿಸುವ ಉದ್ಯಮವನ್ನು ನಡೆಸುತ್ತಿದ್ದರೂ, ಉತ್ಪತ್ತಿಯಾಗುವ ವಿದ್ಯುತ್ತನ್ನು ಕಡುಚಳಿಗಾಲದಲ್ಲಿ ಮನೆಗಳನ್ನು ಬೆಚ್ಚಗಿರಿಸುವುದಕ್ಕಾಗಿ ರಾಷ್ಟ್ರೀಯ ವಿದ್ಯುತ್ ಜಾಲಕ್ಕ್ಕೆೆ ಪೂರೈಕೆ ಮಾಡುತ್ತವೆ.

ಯುರೋಪ್ ಖಂಡದ ದಕ್ಷಿಣ ಭಾಗದ ದೇಶಗಳಲ್ಲಿ ತ್ಯಾಜ್ಯಗಳನ್ನು ದಹಿಸಲಾಗುತ್ತಿ ರುವುದರಿಂದ ಉತ್ಪತ್ತಿಯಾಗುವ ಶಾಖವನ್ನು ಬಳಸಿಕೊಳ್ಳದಿರುವುದರಿಂದ ಅವು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಆದರೆ ಸ್ವೀಡನ್‌ನಲ್ಲಿ ಇದನ್ನು ತ್ಯಾಜ್ಯ ಇಂಧನವನ್ನು ಪಳೆಯುಳಿಕೆಜನ್ಯ ಇಂಧನ (ಪೆಟ್ರೋಲ್,ಡೀಸೆಲ್ ಇತ್ಯಾದಿ)ಗಳಿಗೆ ಪರ್ಯಾಯವಾಗಿ ಬಳಸಲಾಗುತ್ತಿದೆ.

ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ ತ್ಯಾಜ್ಯಗಳನ್ನು ಭೂಮಿಯಲ್ಲಿ ಹುಗಿಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಅವು ದಂಡವನ್ನು ಪಾವತಿಸುವ ಬದಲಾಗಿ ಅವರು ಅದನ್ನು ಸಂಸ್ಕರಿಸಲು ಸ್ವೀಡನ್‌ಗೆ ಕಳುಹಿಸಿಕೊಡುತ್ತವೆಂದು ಗ್ರಿಪ್‌ವಾಲ್ ಅಭಿಪ್ರಾಯಿಸುತ್ತಾರೆ.

ಸ್ವೀಡನ್ ನಗರಸಭೆಗಳು ಭವಿಷ್ಯದಲ್ಲಿ ವಸತಿಪ್ರದೇಶಗಳಲ್ಲಿ ಸ್ವಯಂಚಾಲಿತ ನಿರ್ವಾತ ವ್ಯವಸ್ಥೆಗಳಂತಹ ತ್ಯಾಜ್ಯ ಸಂಗ್ರಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಿವೆ. ಈ ವ್ಯವಸ್ಥೆಯಲ್ಲಿ ಭೂಗತವಾದ ಕಂಟೈನರ್ ವ್ಯವಸ್ಥೆಗಳ ಮೂಲಕವೇ ಕಸವನ್ನು ಸಾಗಿಸಲಾಗುತ್ತದೆ. ಹೀಗಾಗಿ ತ್ಯಾಜ್ಯಸಂಗ್ರಹಕ್ಕೆ ಸಾರಿಗೆಯನ್ನು ಬಳಸುವ ಅಗತ್ಯವನ್ನೂ ಇದು ನಿವಾರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News