ಸ್ಮಾರ್ಟ್‌ಫೋನ್ ಮಾರಾಟದಲ್ಲಿ ತೀವ್ರ ಇಳಿಕೆ: ಉತ್ಪಾದನೆಯಲ್ಲಿ ಕಡಿತ

Update: 2016-12-13 13:11 GMT

ಹೊಸದಿಲ್ಲಿ,ಡಿಸೆಂಬರ್ 13: ಹಳೆ ನೋಟು ಅಮಾನ್ಯವಾದ ನಂತರ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಂದಗತಿಯ ವ್ಯವಹಾರ ಕಂಡು ಬಂದಿದೆ. ಆದ್ದರಿಂದ ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಕಂಪೆನಿಗಳು ಉತ್ಪಾದನೆಯಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಆಗಿರುವ ಇಳಿಕೆ ಉತ್ಪಾದನೆಯಲ್ಲಿ ಕಡಿಮೆಗೊಳಿಸಲು ಸ್ಮಾರ್ಟ್‌ಫೋನ್ ಉತ್ಪಾದಕ ಕಂಪೆನಿಗಳನ್ನು ಪ್ರೇರೇಪಿಸಿದ್ದು, ಕೆಲವು ಫ್ಯಾಕ್ಟರಿಗಳು ಕೆಲಸಗಾರರನ್ನು ಕೈಬಿಡುತ್ತಿವೆ. ನೋಟು ನಿಷೇಧಕ್ಕಿಂತ ಮೊದಲು ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟ ತಿಂಗಳಿಗೆ 175-200 ಕೋಟಿ ರೂಪಾಯಿವರೆಗೂ ವ್ಯವಹಾರವಿತ್ತು.

ಈಗ ಇದರ ಶೇ.40ರಷ್ಟು ಮಾತ್ರ ಮಾರಾಟವಾಗುತ್ತಿದೆ. ಆ್ಯಪಲ್ ಸಹಿತ ಬೃಹತ್ ಕಂಪೆನಿಗಳಿಗೆ ಗುತ್ತಿಗೆ ಆಧಾರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸಿ ನೀಡುತ್ತಿರುವ ಬಹುರಾಷ್ಟ್ರ ಕಂಪೆನಿ ಫೋಕ್ಸ್‌ಕೋನ್ ಹೈದರಾಬಾದ್ ಸಿರಿಸಿಟಿಯ ನಾಲ್ಕು ಫ್ಯಾಕ್ಟರಿಗಳಲ್ಲಿ ಸುಮಾರು ಎಂಟುಸಾವಿರ ಉದ್ಯೋಗಿಗಳಿದ್ದಾರೆ. ಇವರಲ್ಲಿ 1,700 ಮಂದಿಯನ್ನು ರಜೆಯಲ್ಲಿ ಹೋಗಲು ಸೂಚಿಸಲಾಗಿದೆ.

ಸ್ಮಾರ್ಟ್ ಫೋನ್ ಉತ್ಪಾದನೆ ತಿಂಗಳಿಗೆ 24ಲಕ್ಷದಿಂದ ಹನ್ನೆರಡು ಲಕ್ಷಕ್ಕೆ ಕಡಿಮೆಗೊಳಿಸಲು ನಿರ್ಧರಿಸಲಾಗಿದೆ.. ಚೈನೀಸ್ ಕಂಪೆನಿಗಳಾದ ಶಾವೊಮಿ, ಒಪ್ಪೊ, ಜಿಯೊನಿ ಮುಂತಾದ ಫೋನ್‌ಗಳನ್ನು ಫಾಕ್ಸ್‌ಕೋನ್ ಭಾರತದಲ್ಲಿ ನಿರ್ಮಿಸುತ್ತಿದೆ.

ಇತರ ಪ್ರಮುಖ ಕಂಪೆನಿಯ ಇಂಟೆಕ್ಸ್, ಲಾವಾ. ಕಾರ್ಬನ್ ಮಾರಾಟದಲ್ಲಾದ ಮಂದಗತಿಯ ಹಿನ್ನೆಲೆಯಲ್ಲಿ ಕೆಲಸಗಾರರ ಸಂಖ್ಯೆಯನ್ನು ಶೇ.10ರಿಂದ ಶೇ. 40ರಷ್ಟು ಕಡಿಮೆಗೊಳಿಸಲು ನಿರ್ಧರಿಸಿದೆ ಎಂದು ಸೂಚನೆ ಲಭಿಸಿದೆ. ಕಾರ್ಬನ್ ಕಂಪೆನಿಯ ನೋಯ್ಡದ ಎರಡು ಪ್ಲಾಂಟ್‌ಗಳಿಂದ 1,200 ರಿಂದ 2000ರಷ್ಟು ಕೆಲಸಗಾರರನ್ನು ಕೈಬಿಡಲು ನಿರ್ಧರಿಸಲಾಗಿದೆ.

ಲಾವಾಕಂಪೆನಿ ಈ ತಿಂಗಳಿಂದ 5,000 ಮಂದಿಯನ್ನು ಕೆಲಸದಿಂದ ಕೈಬಿಡಲು ನಿರ್ಧರಿಸಿದೆ. ಭಾರತೀಯ ಕಂಪೆನಿಯಾದ ಮೈಕ್ರೊಮ್ಯಾಕ್ಸ್ ಈ ಹಿಂದೆಯೇ ತನ್ನ ಉತ್ಪಾದನೆಯನ್ನು ಕಡಿಮೆ ಮಾಡಿತ್ತು. ಇಂಟಕ್ಸ್‌ನ ನೋಯ್ಡದ ಪ್ಲಾಂಟ್‌ನಿಂದ ಜನವರಿಯಿಂದ 500 ಕಾರ್ಮಿಕರನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ಸರಕಾರ 500,1000 ರೂಪಾಯಿ ಹಳೆ ನೋಟುಗಳಿಗೆ ನಿಷೇಧವನ್ನು ಘೋಷಿಸಿದ ಬಳಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕುಸಿತ ಸಂಭವಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News